ಕೆಎನ್‌ಎನ್‌ಸಿನಿಮಾಡೆಸ್ಕ್: ಟೈಟಲ್ ಮತ್ತು ಕಂಟೆಂಟ್, ಟೀಸರ್,ಟ್ರೇಲರ್ ಹಾಗು ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಕಡಲ ತೀರದ ಭಾರ್ಗವ’ನ ಅಬ್ಬರ ತೆರೆಮೇಲೆ ನಿನ್ನೆಯಿಂದ ಅಂದ್ರೆ ಮಾರ್ಚ್3 ರಿಂದ ಶುರುವಾಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರದ ಪನ್ನಗ ಸೋಮಶೇಖರ್ ನಿರ್ದೇಶನದ ‘ಕಡಲತೀರದ ಭಾರ್ಗವ’ ಕಡಲಿನಂತೆ ಒಳಗೆ ನಿಗೂಢ,ರಹಸ್ಯ ಗಳನ್ನ ಬಚ್ಚಿಟ್ಟುಕೊಂಡ ಮನುಷ್ಯನ ಮನಸಿನಾಳದ ಕಥೆಯನ್ನ ಕಡಲ ತೀರದಲ್ಲಿ ನಿಂತು ಹೇಳುವ ಪ್ರಯತ್ನ ಅಂದ್ರೆ ತಪ್ಪಿಲ್ಲ.
ಕಥಾ ನಾಯಕ ಭರತ್ ಮತ್ತು ಭಾರ್ಗವ ಬಾಲ್ಯ ದ ಸ್ನೇಹಿತರು.ಕಡಲಿನಂತೆ ವಿಶಾಲವಾಗಿ ಹಬ್ಬಿದ್ದ ಇವರಿಬ್ಬರ ಸ್ನೇಹದ ನಡುವೆ ಇಂಪನ ಎಂಬ ಮತ್ಸ್ಯ ಕನ್ಯೆಯ ಪ್ರವೇಶವಾದ್ರೆ ಏನಾಗತ್ತೆ ಅನ್ನೋದು ಕಥೆಯ ಒನ್ ಲೈನ್ ಸ್ಟೋರಿ.
ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಕಡಲ ತೀರದ ಸ್ನೇಹದಲ್ಲಿ ಕನ್ಯೆಯ ಆಗಮನವಾದಾಗ ಅವರ ಮನಸಿನ ಒಳಗೊಳಗೆ ನಡೆಯುವ ತಿಕ್ಕಾಟ,ಗೊಂದಲ,ಆಸೆ,ಸಿಟ್ಟು ಇನ್ಯಾದಿಗಳ ಒಳಗಿನ ಗುದ್ದಾಟವನ್ನ ತೆರೆಯ ಮೇಲೆ ಬೋರಾಗದಂತೆ ಕ್ಯೂರಿಯಾಸಿಟಿ ಇಂದ ನೋಡುವಂತೆ ತೋರಿಸಿದ್ದಾರೆ ನಿರ್ದೇಶಕ ಪನ್ನಗ ಸೋಮಶೇಖರ್.
ಚಿತ್ರದಲ್ಲಿ 3 ಪ್ರಮುಖ ಪಾತ್ರಗಳನ್ನಿಟ್ಟು ಕೊಂಡು ಅದರ ಸುತ್ತ ಕಥೆ ಹೆಣೆದು ವಿಭಿನ್ನವಾಗಿ ಸೈಕಾಲಜಿಕಲ್ ಥ್ರಿಲ್ಲರ್ ಆಗಿ ತೆರೆಯ ಮೇಲೆ ಮೂಡಿ ಬರುವಂತೆ ಮಾಡಿದ್ದಕ್ಕೆ ಪ್ರೇಕ್ಷಕ ಪ್ರಭು ಜೈ ಅಂದಿದ್ದಾನೆ. ಇನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೃತಿ ಪ್ರಕಾಶ್,ಭರತ್,ಹಾಗು ವರುಣ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ರೆ, ತಾಂತ್ರಿಕತೆಯಲ್ಲಿ ಕೆಲಸ ಮಾಡಿದ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣದ ಶ್ರಮ ವರ್ಕ್ ಆದಂತಿದೆ.
ಸಂಭಾಷಣೆ ಹಾಗು ನಿರೂಪಣೆ ಕೊಂಚ ವೇಗ ಗತಿಯಲ್ಲಿ ಸಾಗಿದಿದ್ದರೆ ಸಿನಿಪ್ರೇಮಿಗಳು ಬೇಗ ಕಡಲ ತೀರವ ಸೇರುತ್ತಿದ್ದರೇನೋ ಎಂದೆನಿಸುತ್ತೆ. ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ ಅಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಥ್ರಿಲ್ಲಿಂಗ್ ಕಹಾನಿ ಕಡಲ ತೀರದ ಭಾರ್ಗವ ಪ್ರೇಕ್ಷಕರನ್ನ ಕಡಲ ತೀರದಲ್ಲಿ ಕೂರಿಸಿ ಸೈಕಾಲಜಿ ಕಲ್ ಥ್ರಿಲ್ಲರ್ ಕಹಾನಿ ಹೇಳ್ತಿರೋದು ನಿಜ.
Leave a Review