ಬೆಳಗಾವಿ: ನಿನ್ನೆ ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ಭದ್ರತಾ ಲೋಪ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯ ಸುವರ್ಣಸೌಧ ಸುತ್ತಾಮುತ್ತಾ ವ್ಯಾಪಕ ಬಿಗಿಭದ್ರತೆ ಒದಗಿಸಲಾಗಿದೆ. ಸುವರ್ಣಸೌಧಕ್ಕೆ ಬರುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿತ್ತು. ಸೌಧದ ಎಲ್ಲಾ ದ್ವಾರಗಳಲ್ಲೂ ಭಾರಿ ಪೋಲಿಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಒಂದು ದ್ವಾರದಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರವೇಶವಕಾಶ ನೀಡಲಾಗಿದ್ದು, ಉಳಿದಂತೆ ಬೇರೆ ಯಾವ ದ್ವಾರಗಳ ಕಡೆಯೂ ಸಾರ್ವಜನಿಕರಿಗೆ ಪ್ರವೇಶವಿಲ್ಲ. ನೂರಾರು ಸಂಖ್ಯೆಯಲ್ಲಿ ಪೋಲಿಸರ ನಿಯೋಜಿಸಿದ್ದು ಭದ್ರತಾ ಲೋಪವಾಗಬಾರದೆಂದು ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು, ಮೊಗಸಾಲೆ, ಕಾರಿಡಾರ್ಗಳಿಗೆ ಖುದ್ದು ತಾವೇ ತೆರಳಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.
ಮಾರ್ಷಲ್ಗಳಿಗೆ ಭದ್ರತಾ ಲೋಪವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದರು.ಸುವರ್ಣಸೌಧ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನಿಯೋಜನೆಯಲ್ಲಿ ಹೆಚ್ಚಳ ಮಾಡಲಾಗಿದೆ.
ಇಂದು ಹಲವಾರು ಜನರನ್ನು ಪೋಲಿಸರು ವಿಚಾರಣೆ ನಡೆಸಿ ಹೊರ ಹಾಕಿದ ಘಟನೆ ಜರುಗಿದೆ.ಓರ್ವ ಸ್ವಾಮಿಜಿಯನ್ನು ಪೋಲಿಸರು ತರಾಟೆಗೆ ತಗೆದುಕೊಂಡು ಹೊರ ದಬ್ಬಿದರು. ಅದೆ ರೀತಿ ಮಹಿಳೆಯರು ಸೇರಿದಂತೆ ಹಲವಾರು ಸಚಿವ ಶಾಸಕರ ಹಿಂಬಾಲಕರನ್ನು ಹೊರ ಹಾಕಿದ ಘಟನೆ ಜರುಗಿತು.
ಡಾ.ಜಿ.ವೈ. ಪದ್ಮನಾಗರಾಜು