ಚಿಕ್ಕಬಳ್ಳಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಪುನಃ ರಾಜ್ಯಕ್ಕೆ ಆಗಮಿಸಲಿದ್ದು ಚಿಕ್ಕಬಳ್ಳಪುರದಲ್ಲಿ ಒಂದು ಬೃಹತ್ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗಾಗಿ ಮತ ಯಾಚಿಸಲಿದ್ದಾರೆ.ದೇವನಹಳ್ಳಿಯ ಹೊರವಲಯದಲ್ಲಿ ಸಿದ್ಧಪಡಿಸಲಾಗಿರುವ ವೇದಿಕೆ ಸುತ್ತಮುತ್ತ ಹಲವು ಸುತ್ತ್ತಿನ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಾರ್ವಜನಿಕರಿಗೆ ಉತ್ತರ ಭಾಗದ ದ್ವಾರದ…
ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಗಣ್ಯರು ಮತ್ತು ಮಾಧ್ಯಮದವರು ದಕ್ಷಿಣ ದಿಕ್ಕಿನ ಗೇಟ್ ಮೂಲಕ ಒಳಗೆ ಬರಬೇಕು ಎಂದು ಹೇಳುತ್ತಾರೆ.
ಪ್ರಧಾನಿಯವರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸಕಲ ಭದ್ರತಾ ಏರ್ಪಾಟುಗಳನ್ನು ಮಾಡಲಾಗಿದೆ, ಮಾಧ್ಯಮದವರನ್ನು ಹೊರತು ಪಡಿಸಿ ಬೇರೆ ಯಾರೇ ಆಗಲಿ ತಮ್ಮ ಮೊಬೈಲ್ ಫೋನ್ ಬಿಟ್ಟು ಯಾವುದೇ ವಸ್ತುವನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದುಹೇಳುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಸುಮಾರು 1,500 ಜನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದಿದ್ದಾರೆ.