ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ತಮ್ಮ ಬ್ಯಾಟರ್ ಗಳ ಬಗ್ಗೆ ಬಾಂಗ್ಲಾದೇಶದ ಪ್ರಧಾನ ಕೋಚ್ ಮುಷ್ತಾಕ್ ಅಹ್ಮದ್ ಅವರ ಬೇಸರದ ನುಡಿ. ಈ ಸೋಲುಗಳಿಂದ ಹೊರಬಂದು ನಮ್ಮ ಆಟಗಾರರು ಶೀಘ್ರ ಲಯ ಕಂಡುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಯುಎಇನ ಅಬುಧಾಬಿಯಲ್ಲಿ ಶನಿವಾರ ನಡೆದ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ೮೧ ರನ್ ಗಳ ಸೋಲು ಅನುಭವಿಸಿದ ಬಾಂಗ್ಲಾದೇಶ ತಂಡ ಸರಣಿಯನ್ನೂ ಕಳೆದುಕೊಂಡಿತು. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಮುಷ್ತಾಕ್ ಅಹ್ಮದ್ ಅವರು, ರಶೀದ್ ಖಾನ್ ದೊಡ್ಡ ಪ್ರಮಾಣದಲ್ಲಿ ಸ್ಪಿನ್ ಮಾಡುವ ಬೌಲರ್ ಅಲ್ಲ. ಆದರೆ, ಅವರು ಬಹಳ ಅನುಭವಿಯಾಗಿದ್ದು ವಿಕೆಟ್ ಪಡೆಯುವಲ್ಲಿ ನಿಸ್ಸೀಮರು. ಅವರ
ಲೈನ್ ಮತ್ತು ಲೆಂಗ್ತ್ ಬಹಳ ಸ್ಥಿರವಾಗಿದೆ. ನಾವು ಕೆಲವೊಮ್ಮೆ ಚೆಂಡನ್ನು ನೋಡಬೇಕು, ಬೌಲರ್ ಅನ್ನು ಅಲ್ಲ. ನಾವು ಬೇಗನೆ ಸುಧಾರಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಮೂಲದ ಮಾಜಿ ಸ್ಪಿನ್ನರ್ ಅಭಿಪ್ರಾಯಪಟ್ಟರು.
“ನೀವು ಉತ್ತಮ ಮನಸ್ಥಿತಿಯನ್ನು ಹೊಂದಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಾವುದೇ ಬೌಲರ್ ವಿರುದ್ಧಆಡಬಹುದು. ರಶೀದ್ ಖಾನ್ ಅವರು ಹಲವು ವರ್ಷಗಳಿಂದ ಯಶಸ್ವಿಯಾಗಿದ್ದಾರೆ, ಆದರೆ ಅದೇ ಸಮಯದಲ್ಲಿ ಬಾಂಗ್ಲಾದೇಶದ ಬ್ಯಾಟಿಂಗ್ ವಿಭಾಗವಾಗಿ, ಚೆಂಡನ್ನು ಹೇಗೆ ಆಡಬೇಕೆಂದು ನಮಗೆ ತಿಳಿದಿರಬೇಕು, ಬೌಲರ್ ಅನ್ನು ಅಲ್ಲ” ಎಂದರು.
ಬೌಲರ್ಗಳ ವಿರುದ್ಧ ಸ್ಪಿನ್ನರ್ಗಳ ವಿರುದ್ಧ ಬ್ಯಾಟ್ಸ್ಮನ್ಗಳು ಏನು ಮಾಡಬೇಕು ಎಂಬುದನ್ನು ಮುಷ್ತಾಕ್ ವಿವರಿಸಿದರು. ದೊಡ್ಡ ಹೊಡೆತಗಳಿಗೆ ಹೋಗುವ ಬದಲು,
ರನ್ಗಳನ್ನು ಗಳಿಸುವುದರ ಬಗ್ಗೆ ಮೇಲೆ ಗಮನಹರಿಸಬೇಕು ಎಂದು ತಿಳಿಸಿದರು.
ಅಫ್ಘಾನಿಸ್ತಾನದ ವಿರುದ್ಧ ಟಿ೨೦ ಸರಣಿಯನ್ನು ೩-೦ ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ ಇದೀಗ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿದೆ. ಮೂರು ಪಂದ್ಯಗಳ ಏಕದಿನ ಪಂದ್ಯದಲ್ಲಿ ೨-೦ ಹಿನ್ನಡೆಯಲ್ಲಿದ್ದು ಕ್ಲೀನ್ ಸ್ವೀಪ್ ಭೀತಿ ಎದುರಿಸುತ್ತಿದೆ. ಬೌಲರ್ಗಳಿಗೆ ಅನುಕೂಲಕರವಾಗಿದ್ದ ಪಿಚ್ಗಳಲ್ಲಿ ಬ್ಯಾಟ್ಸ್ಮನ್ಗಳು ಸರಿಯಾಗಿ ಆಡಲು ಸಾಧ್ಯವಾಗದಿರುವುದು ಬಾಂಗ್ಲಾದೇಶಕ್ಕೆ ಮುಳುವಾಗಿದೆ.