ಬೆಂಗಳೂರು : ಕೆ ಆರ್ ಪುರ ಪೊಲೀಸರು ರಂಜಿತ್, ಮಣಿಕಂಠ, ವಿನೋದ್ ರವರಗಳನ್ನು ಬಂಧಿಸಿ ೬೦ ವಿವಿಧ ಬಗೆಯ ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
೫೦ ಲಕ್ಷ ರೂಪಾಯಿ ಮೌಲ್ಯದ ಈ ವಾಹನಗಳನು ಹೆಚ್ಎಎಲ್, ಕೆಆರ್ ಪುರ, ಆಂಧ್ರ ಪ್ರದೇಶ್ ರಾಜ್ಯ ಸೇರಿದಂತೆ ಸುಮಾರು ಎಂಟು ಕಡೆ ಈ ಆರೋಪಿಗಳು ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಆಯುಕ್ತರು ತಿಳಿಸಿದರು.
ಮತ್ತೊಂದು ಕಳವು ಪ್ರಕರಣದಲ್ಲಿ ಸದಾಶಿವನಗರ ಪೊಲೀಸರು ಅಜೀರಾ ಬೇಗಂ ಮತ್ತು ಶಬೀರ್ ಹುಸೇನ್ ಅಸ್ಸಾಂರವರುಗಳನ್ನು…
ಬಂಧಿಸಿ ಒಂದು ಕೋಟಿ ೩೭ ಲಕ್ಷ ರೂಪಾಯಿ ಬೆಲೆಬಾಳುವ ಚುನಾವಣಾ ಹಾಗೂ ವಾಚುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಮನೆಯ ಮಾಲೀಕರಾದ ಅಭಿಷೇಕ್ ರವರು ಮಡದಿ ಮತ್ತು ಮಕ್ಕಳ ಜೊತೆಯಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಹೊರಗೆ ಹೋಗಿದ್ದ ಸಮಯದಲ್ಲಿ ಬೀಗ ಮುರಿದು ಕಳವು ಮಾಡಿರುತ್ತಾರೆ ಎಂದು ಪೊಲೀಸರು ತಿಳಿಸಿದರು.



