ವಿಜಯಪುರ: ದೇವನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ, ನಡೆದ ೨೦೨೫ – ೨೬ ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿ, ಹಲವರು ವಿಭಾಗಗಳಲ್ಲಿ ಬಹುಮಾನಗಳನ್ನು ಗಳಿಸಿ ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ.೧೭ ವಯೋಮಾನದ ೧೦೦ ಮೀ ಓಟ- ಎಂ.ಪದ್ಮಶ್ರೀ,ಪ್ರಥಮ ಸ್ಥಾನ, ೧೪ ವಯೋಮಾನದ ೧೦೦ ಮೀ ಓಟ ಸಿ.ಹರಿಣಿ ಪ್ರಥಮ ಸ್ಥಾನ, ೨೦೦ ಮೀ ಓಟ ಎಂ. ಶ್ರೇಯಾಶ್ರೀ ಪ್ರಥಮ ಸ್ಥಾನ, ಗುಂಡು ಎಸೆತ ಎಸ್.ಪಾವನಿ – ಪ್ರಥಮ ಸ್ಥಾನ ಎತ್ತರ ಜಿಗಿತ ಎಂ. ಶ್ರೇಯಶ್ರೀ ಪ್ರಥಮ ಸ್ಥಾನ, ಟ್ರಿಪಲ್ ಜಿಗಿತ – ಎಚ್.ಎಂ. ಪ್ರತೀಕ್ಷಾ ಪ್ರಥಮ ಸ್ಥಾನ, ಜಾವಲಿನ್ ಎಸೆತ – ಕೆ. ಕೇಶವ ಪ್ರಸಾದ್ ದ್ವಿತೀಯ ಸ್ಥಾನ, ಹ್ಯಾಮರ್ ಎಸೆತ – ಎಸ್. ಪಾವನಿ ದ್ವಿತೀಯ ಸ್ಥಾನ, ಬಾಲಕರ ವಿಭಾಗದ ಹ್ಯಾಮರ್ ಎಸೆತ – ಜಿ ಪ್ರಣಿತ್ ತೃತೀಯ ಸ್ಥಾನ ಬಾಲಕರ ವಿಭಗದ ಗುಂಡು ಎಸೆತ – ಜಿ ಪ್ರಣಿತ್ ತೃತೀಯ ಸ್ಥಾನ, ಬಾಲಕರ ವಿಭಾಗದ ಡಿಸ್ಕ್ ಎಸೆತ ಕೆ. ಕೇಶವ ಪ್ರಸಾದ್ – ತೃತೀಯ ಸ್ಥಾನ, ಬಾಲಕರ ವಿಭಾಗದ ಹ್ಯಾಮರ್ ಎಸೆತ – ಜಿ ಪ್ರಣಿತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ತಾಲೂಕು ಹಂತದಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಎಂ.ಸತೀಶ್ ಕುಮಾರ್ ವ್ಯವಸ್ಥಾಪಕ ನಿರ್ದೇಶಕ ಎಸ್.
ಕೃಪಾಶಂಕರ್ ಆಡಳಿತ ಅಧಿಕಾರಿ ರಜತಾಪಟೇಲ್ ಮುಖ್ಯಶಿಕ್ಷಕ ವಿ.ಬಸವರಾಜು ಹಾಗೂ ಶಿಕ್ಷಕರು ಅಭಿನಂದಿಸಿದರು.
“ಪ್ರೌಢಶಾಲಾ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾಕೂಟ ಜಿಲ್ಲಾ ಹಂತಕ್ಕೆ ಆಯ್ಕೆ”



