ಚಿಕ್ಕಬಳ್ಳಾಪುರ: ದಿನಾಂಕ 06-01-2024 ರಿಂದ 07-01-2024ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ 16 ವರ್ಷದ ವಯೋಮಿತಿಯ ಬಾಲಕ/ಬಾಲಕಿಯರ 11 ಜನ, 18 ವರ್ಷದ ವಯೋಮಿತಿಯ ಬಾಲಕ/ಬಾಲಕಿಯರ 3 ಜನ ಹಾಗೂ ಪುರುಷ/ ಮಹಿಳೆಯರ 11 ಜನ ಒಟ್ಟು 25 ಜನ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು,
ಈ ಸಂಧರ್ಭದಲ್ಲಿ ಅಸೋಸಿಯೇಷನ್ನ ಪದಾಧಿಕಾರಿಗಳಾದ ಪ್ರಸನ್ನಕುಮಾರ್, ಮಂಜುನಾಥ್, ಸುನಿಲ್, ಭರತ್ಕುಮಾರ್, ಇಸ್ಸಾಕ್, ಚಂದ್ರಮೋಹನ್ ಉಪಸ್ಥಿತರಿದ್ದರು. ತಂಡದ ತರಬೇತಿದಾರರಾಗಿ ಮಂಚನಬಲೆ ಶ್ರೀನಿವಾಸ್ ಹಾಗೂ ವ್ಯವಸ್ಥಾಪಕರಾಗಿ ಅಂಬರೀಶ್ರವರು ತಂಡದ ಜೊತೆ ತೆರಳಲಿದ್ದು, ಸದರಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ತಂದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲೆಂದು ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ನ ಜಿಲ್ಲಾಧ್ಯಕ್ಷರಾದ ಕೆ.ವಿ.ನವೀನ್ಕಿರಣ್ರವರು ಶುಭ ಹಾರೈಸಿದ್ದಾರೆ.