ರಾಮನಗರ: ತಾಲ್ಲೂಕಿನ ಅಕ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ಶಿವುಗೌಡ ನೂತನ ಅಧ್ಯಕ್ಷರಾಗಿ, ಕಾಂಗ್ರೆಸ್ ಬೆಂಬಲಿತ ಗೋಪಾಲ್ ಉಪಾಧ್ಯಕ್ಷರಾಗಿ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಕ್ಕೂರು ಪಿಎಸಿಎಂಎಸ್ ನಲ್ಲಿ ಅದ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಸಂಘದಲ್ಲಿ ಚುನಾವಣೆ ನಡೆಯಿತು. ಅದ್ಯಕ್ಷ ಸ್ಥಾನಕ್ಕೆ ಶಿವುಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಗೋಪಾಲ್ ಒಂದೊಂದೆ ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಿಂದ ರಿಟರ್ನಿಂಗ್ ಅಧಿಕಾರಿಯಾಗಿದ್ದ ಮಂಜುನಾಥ್ ಅವರುಗಳ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಪ್ರಭಾರ ಕಾರ್ಯದರ್ಶಿ ಅನಿತಾ ಇದ್ದರು.
ಚುನಾವಣಾ ಪ್ರಕ್ರಿಯೆಯಲ್ಲಿ 10 ನಿರ್ದೇಶಕರಾದ ಸಿದ್ದಲಿಂಗಯ್ಯ, ಲೋಕೇಶ್, ಪುಟ್ಟಸ್ವಾಮಯ್ಯ, ಹನುಮೇಶ್, ಅನುಸೂಯ, ಶಿವಣ್ಣ, ಚಿಕ್ಕಸ್ವಾಮಿ, ಸುಭಾಷ್ ಚಂದ್ರ, ಭಾಗವಹಿಸಿದ್ದರು. ಒರ್ವ ನಿರ್ದೇಶಕಿ ಶಿವಮ್ಮ ಗೈರಾಗಿದ್ದರು.ಈ ವೇಳೆ ನೂತನ ಅಧ್ಯಕ್ಷ ಶಿವುಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ ನಾನು ಸಂಘದ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಯಾಗಲು ಸಹಕರಿಸಿದ ಎಲ್ಲ ನಿರ್ದೇಶಕರು ಮತ್ತು ಮುಖಂಡರು, ಪಕ್ಷದ ವರಿಷ್ಟರು ಗಳಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ.ಮಂಜುನಾಥ್, ಮುಖಂಡ ನಾಗರಕಲ್ಲುದೊಡ್ಡಿ ಶಿವಣ್ಣ ಹಾಗೂ ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಪ್ರಶ್ತುತ ಸಂಘವು ಲಾಭದಲ್ಲಿದ್ದು, 4.5 ಕೋಟಿ ರೂ ರೈತರಿಗೆ ಬೆಳೆ ಸಾಲವನ್ನು ವಿತರಣೆ ಮಾಡಲಾಗಿದೆ, ಮತ್ತಷ್ಟು ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಜನರ ಬಳಿ ತಲುಪಿ ಅವರಿಗೆ ಸಂಘದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲು ಒಳ್ಳೆಯ ಅವಕಾಶಗಳಿವೆ. ಆಗಾಗಿ ಸಂಘದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಸಹಕಾರದಿಂದ ರೈತರು ಮತ್ತು ಸಂಘದ ಆರ್ಥಿಕ ಬೆಳವಣಿಗೆ ಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ತಿಳಿಸಿದರು.
ಈ ವೇಳೆ ನೂತನ ಅಧ್ಯಕ್ಷ- ಉಪಾದ್ಯಕ್ಷರನ್ನು ಎಪಿಎಂಸಿ ಮಾಜಿ ಅದ್ಯಕ್ಷ ಪುಟ್ಟರಾಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ್, ಜೆಡಿಎಸ್ ವಕೀಲರ ಘಟಕದ ಅಧ್ಯಕ್ಷ ರಾಜಶೇಖರ, ಮುಖಂಡರಾದ ರಾಜು, ಬೆಟ್ಟಸ್ವಾಮಿ, ವೆಂಕಟೇಶ್, ರವೀಶಾಣ್ಣ ಕೆಂಪಣ್ಣ, ರಂಗಸ್ವಾಮಿ, ಸಿದ್ದಲಿಂಗಣ್ಣ ಮೀಸೆನಾಥಪ್ಪ, ಲೋಕೇಶ್, ಮಂಡಿ ಪ್ರಕಾಶ, ಜೈ ಕುಮಾರ್ ಮತ್ತಿತರರು ಹಾಜರಿದ್ದು ಅಭಿನಂದಿಸಿದರು.