ನೆಲಮಂಗಲ: ಸಮಾಜದ ಜನರಲ್ಲಿನ ಧಾರ್ಮಿಕ ನಂಬಿಕೆಗಳು ಸಂಕಷ್ಟದಿಂದ ಬದುಕುವ ಎಂದು ಸಮಾಜ ಸೇವಕ ಎನ್. ಎಂ ರವಿಕುಮಾರ್ ಅಭಿಪ್ರಾಯ ಪಟ್ಟರು.ನಗರಸಭೆ ವ್ಯಾಪ್ತಿಯ ರೋಹಿತ್ ನಗರದಲ್ಲಿ ಸಮಾಜ ಸೇವಕ ರವಿಕುಮಾರ್ ಸಹಕಾರದೊಂದಿಗೆ ಆಯೋಜಿಸಿದ್ದ ಓಂ ಶಕ್ತಿ ಅಮ್ಮನವರ ದರ್ಶನ ಯಾತ್ರೆ ಸುಮಾರು 300ಕ್ಕೂ ಹೆಚ್ಚು ನಿವಾಸಿಗಳು ಈ ಪ್ರವಾಸ ಕೈಗೊಂಡಿದ್ದು, ಅವರಿಗೆ ಮೂರು ಖಾಸಗಿ ಬಸ್ನ ವ್ಯವಸ್ಥೆ ಮಾಡಲಾಗಿದೆ.
ಸಮಾನತೆಯನ್ನು ಸಾರುವ ರಕ್ತದ ಬಣ್ಣವಾದ ಕೆಂಪು ವರ್ಣದ ವಸ್ತ್ರ ಧರಿಸಿದ ಭಕ್ತರು ಈ ಯಾತ್ರೆ ಕೈಗೊಂಡಿದ್ದಾರೆ.ಪ್ರತಿ ವರ್ಷ ಓಂ ಶಕ್ತಿ ತಾಯಿ ಸೇವೆ ಮಾಡುತ್ತಿದ್ದೇನೆ. 2019 ರಿಂದಲೂ ಹೀಗೆ ಉಚಿತವಾಗಿ ಪ್ರವಾಸವನ್ನು ಏರ್ಪಡಿಸುತ್ತಿದ್ದು, ಆ ತಾಯಿ ಬಳಿ ಹೋಗುವುದಕ್ಕೆ ಆರ್ಥಿಕವಾಗಿ ಹಣವಿಲ್ಲದವರನ್ನ ಬಸ್ ಮಾಡಿ ಕಳುಹಿಸಿ ಕೊಡುತ್ತಿದ್ದೇನೆ. ಪ್ರತೀ ವರ್ಷ 4 ಬಸ್ ವ್ಯವಸ್ಥೆ ಮಾಡುತ್ತಿದ್ದು, ಅದರಂತೆ ಈಗ 3 ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಾರಾದರೂ ಓಂ ಶಕ್ತಿ ತಾಯಿ ದೇವಸ್ಥಾನಕ್ಕೆ ಹೋಗುವವರಿದ್ದರೆ ಉಳಿದ ಬಸ್ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಮಾಜಸೇವಕ ಎಂಎಂ ರವಿಕುಮಾರ್ ತಿಳಿಸಿದರು.
ಓಂ ಶಕ್ತಿ ತಾಯಿ ನೆಲೆಸಿರುವ ಜಾಗದಲ್ಲಿ 21 ಪುರುಷ ಹಾಗೂ ಮಹಿಳಾ ಸಿದ್ಧರು ಜೀವಂತ ಸಮಾಧಿಯಾಗಿದ್ದಾರೆ ಎಂಬ ನಂಬಿಕೆ ಇದೆ. ಮಹಿಳಾ ಸಿದ್ಧೆಯೊಬ್ಬರು ಇಲ್ಲಿ ಶಾಶ್ವತವಾಗಿ ನೆಲೆಸಿಭಕ್ತರನ್ನು ಪೊರೆಯುತ್ತಿದ್ದಾಳೆ ಎಂದು ಹೇಳಲಾ ಗುತ್ತಿದ್ದು, ಕರ್ನಾಟಕದಿಂದ ಸಾವಿರಾರು ಭಕ್ತರು ಪ್ರತಿ ವರ್ಷ ಡಿಸೆಂಬರ್ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ಇಲ್ಲಿಗೆ ಯಾತ್ರೆ ಕೈಗೊಳ್ಳುತ್ತಾರೆ.
ಇನ್ನು ಇದೇ ಸಂದರ್ಭದಲ್ಲಿ ನವೀನ್ ಕುಮಾರ್. ಹನುಮಂತರಾಜು. ಹರೀಶ್. ನರಸಿಂಹ ಮೂರ್ತಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ದಣಿ. ಪೈಂಟ್ ಗಂಗಾಧರ್. ಯಾತ್ರಾ ವ್ಯವಸ್ಥಾಪಕಿ ತ್ರಿವೇಣಿ ರವಿಕುಮಾರ್ ಮೈತ್ರಿ ಗೌಡ, ಮಾಲತಿ. ಸ್ವಭಾಗ್ಯ ಹಾಗೂ ಮಾಲೆ ಧರಿಸಿದ ಮಹಿಳೆಯರು ಉಪಸ್ಥಿತರಿದ್ದರು.