ಬೆಂಗಳೂರು: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ತಾವಾಗಿ ತಾವೇ ಎಡವಟ್ಟು ಮಾಡಿಕೊಂಡ್ರಾ ಕೆ.ಎಸ್. ಈಶ್ವರಪ್ಪ.
ನರೇಂದ್ರ ಮೋದಿ ಕಾರ್ಯಕ್ರಮದಿಂದ ದೂರವುಳಿದು ಎಡವಟ್ಟು ಮಾಡಿಕೊಂಡ್ರಾ ಈಶ್ವರಪ್ಪ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯತೊಡಗಿದೆ.
ಹೌದು ಎನ್ನುತ್ತಿದೆ ಬಿಜೆಪಿ ಮೂಲಗಳು. ಅಷ್ಟಕ್ಕೂ ಈಶ್ವರಪ್ಪರ ವಿಚಾರದಲ್ಲಿ ಆಗಿದ್ದೇನು?ಇಂದು ಸಂಜೆ ಬಿಚ್ಚಿಡುತ್ತಿದೆ ಮೋದಿ ಕಾರ್ಯಕ್ರಮದಿಂದ ದೂರವುಳಿದು ಈಶ್ವರಪ್ಪ ತಂದುಕೊಂಡ ಕಂಟಕದ ಕಥೆಯನ್ನ.ಮೊನ್ನೆ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶಕ್ಕೆ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಯಿಂದ ದೂರವುಳಿದ ಈಶ್ವರಪ್ಪ.
ಜೊತೆಗೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಫರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಯಡಿಯೂರಪ್ಪ ಹಾಗೂ ಅವರ ಪುತ್ರರನ್ನು ನಿಂದಿಸಿ, ಮೋದಿ ಕಾರ್ಯಕ್ರಮದಿಂದ ದೂರವುಳಿದಿದ್ದರು. ಸದ್ಯ ಕೆ.ಎಸ್.ಈಶ್ವರಪ್ಪರ ನಡೆಯಿಂದ ಅವರಿಗೆ ಎದುರಾಗುತ್ತಾ ಕಂಟಕ ಎಂದು ವಿಶ್ಲೇಷಿಸಲಾಗುತ್ತಿದೆ.
ಲೋಕಸಭಾ ಚುನಾವಣೆಯ ಟಿಕೆಟ್ ಬಗ್ಗೆ ಚರ್ಚೆಯಾಗುವಾಗಲೇ ದೆಹಲಿಗೆ ತಮ್ಮ ಜೊತೆಗೆ ಬರುವಂತೆ ಈಶ್ವರಪ್ಪರಿಗೆ ಯಡಿಯೂರಪ್ಪ ಆಹ್ವಾನ ನೀಡಿದ್ದರು. ಅಂದು ಈಶ್ವರಪ್ಪ ದೆಹಲಿಗೆ ಹೋಗಲಿಲ್ಲ. ಚುನಾವಣಾ ತಯಾರಿಯ ಸಂದರ್ಭದಲ್ಲಿ ಟಿಕೆಟ್ ಬಗ್ಗೆ ಮಾತುಕತೆ ಮಾಡಿದ್ದು ಬಿಟ್ಟರೇ, ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವಾಗ ಈಶ್ವರಪ್ಪ ಸಭೆಯಿಂದ ದೂರ ಉಳಿದಿದ್ದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಿಂದ ದೂರವಿದ್ದರು. ಅಂದು ಹಾವೇರಿ-ಗದಗ ಲೋಕಸಭಾ ಟಿಕೆಟ್ ಬಗ್ಗೆ ಚರ್ಚಿಸೋಣ. ಬನ್ನಿ ನಾನೇ ನಿಮ್ಮನ್ನು ದೆಹಲಿಗೆ ಕರೆದುಕೊಂಡು ಹೋಗಿ, ಅಮಿತ್ ಶಾ ರ ಮುಂದೆ ಕೂರಿಸುತ್ತೇನೆ ಎಂದಾಗ ಈಶ್ವರಪ್ಪ ಹೋಗಿರಲಿಲ್ಲ. ಬಳಿಕ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾದಾಗ ಬಸವರಾಜ ಬೊಮ್ಮಾಯಿ ಹೆಸರನ್ನು ನೋಡಿ, ಕೆಂಡಾಮಂಡಲರಾಗಿದ್ದರು.
ಇನ್ನು ಪಕ್ಷೇತರರಾಗಿ ಸ್ಫರ್ಧೆ ಮಾಡುವುದಾಗಿಯೂ ಘೋಷಿಸಿದ್ದರು.ಈಗ ಸೋಮವಾರ ಶಿವಮೊಗ್ಗಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಿಂದಲೂ ಈಶ್ವರಪ್ಪ ದೂರವುಳಿದ್ದರು. ಅವರ ಗೈರಿನಿಂದ ಪಕ್ಷಕ್ಕೆ ಯಾವುದೇ ಹಾನಿಯಲ್ಲ. ಸ್ವತಃ ವೈಯಕ್ತಿಕವಾಗಿ ಅವರಿಗೆ ನಷ್ಟ ಎಂದು ಮೂಲಗಳಿಂದ ತಿಳಿದುಬಂದಿದೆ.
ಶಿವಮೊಗ್ಗ ಭಾಗದ ಪ್ರಬಲ ಬಿಜೆಪಿ ಮುಖಂಡರೊಬ್ಬರು ಕಾರ್ಯಕ್ರಮದಿಂದ ದೂರವುಳಿದಿದ್ದರು. ಅವರ ಮಗನ ಟಿಕೆಟ್ಗಾಗಿ ಪಟ್ಟು ಹಿಡಿದು, ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅನಂತ್ಕುಮಾರ್ ಹೆಗಡೆ ಪ್ರಧಾನಿಗಳ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈಗ ಎದುರಾಗಿರುವ ಲೋಕಸಭಾ ಚುನಾವಣೆಗೆ ಅನಂತ್ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಅನುಮಾನ ಎಂದು ಹೇಳಲಾಗುತ್ತಿದೆ. ಈವರೆಗೂ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗಿಲ್ಲ.
ಈಗ ಈಶ್ವರಪ್ಪ ಕೂಡ ಬಿಜೆಪಿಗೆ ಸೆಡ್ಡು ಹೊಡೆದು ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಆಗಮನ ಗೈರಾಗಿ ಕಂಟಕ ತಂದುಕೊಂಡಿದ್ದಾರೆ ಎಂದು ಚರ್ಚಿಸಲಾಗುತ್ತಿದೆ.