ಬೆಂಗಳೂರು: ಎರಡು ತಂಡಗಳಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ಕಡೆಗಳಲ್ಲಿ ಸರಣಿ ಕಳ್ಳತನ ನಡೆಸಿ ನಗ ನಾಣ್ಯ ಲೂಟಿ ಮಾಡಿ ಪರಾರಿಯಾಗಿರುವ ದುರ್ಘಟನೆ ಮಾಗಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಟಿಬಿ ರಸ್ತೆಯ ಜೈ ಜವಾನ್ ಜೈ ಕಿಸಾನ್ ಮೆಗಾ ಮಾರ್ಟ್, ಬಾಲಾಜಿ ಮುಂಭಾಗದ ಕೇಬಲ್ ಕಚೇರಿ, ಧ್ಬನಿ ವರ್ಧಕ ಅಂಗಡಿ, ಬೇಕರಿಗಳ ಬೀಗ ಹೊಡೆದು ಕಳ್ಳತನ ಮಾಡಲಾಗಿದೆ.
ಮಾರ್ಟ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಗದು, ಬೇಕರಿಯಲ್ಲಿ 50 ಸಾವಿರ ನಗದು ಸೇರಿದಂತೆ ಸಿಗರೇಟ್ಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ಎರಡು ತಂಡಗಳಲ್ಲಿ ಬಂದಿದ್ದ ಕಳ್ಳರು ಮಧ್ಯರಾತ್ರಿ ಶಟರ್ ಒಡೆದು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಮಾಗಡಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.