ಚಳ್ಳಕೆರೆ: ಮಧ್ಯ ಕರ್ನಾಟಕದ ಮಳೆಯಾಶ್ರಿತ ಹಾಗೂ ಬರಪೀಡಿತ ನಾ ಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ‘ಭದ್ರಾಮೇಲ್ದಂಡೆಯೋಜನೆ’ಯ ಕಾಮಗಾರಿ ವಿಳಂಬದ ಕುರಿತು ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆದಿ ದೆ. ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ, ಸರ್ಕಾರದ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲಿಖಿತ ಉತ್ತ ರದೊಂದಿಗೆ ಸಮಗ್ರ ವಿವರಣೆ ನೀಡಿದ್ದು, ಕೇಂದ್ರದಿAದ ಅನುದಾನ ಬಾ ರದಿದ್ದರೂ ರಾಜ್ಯ ಸರ್ಕಾರವೇ ೨೦೨೮ರ ಮಾರ್ಚ್ ಅಂತ್ಯದೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
ಶಾಸಕ ರಘುಮೂರ್ತಿ ಆಕ್ರೋಶ: ಕೇಂದ್ರದ ಅನುದಾನವೆಲ್ಲಿ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ೧೨ ತಾಲೂಕುಗಳ ಜನರ ೨ ದಶಕಗಳ ಕನಸಾದ ಈ ಯೋಜನೆ ಕುಂಟುತ್ತಾ ಸಾಗಿದೆ. ಕೇಂದ್ರ ಸರ್ಕಾರ ೨೦೨೩-೨೪ರ ಬಜೆಟ್ನಲ್ಲಿ ೫,೩೦೦ ಕೋಟಿ ರೂ. ಘೋಷಣೆ ಮಾಡಿತ್ತಾದರೂ, ಬಿಡುಗಡೆ ಮಾಡಿಲ್ಲ. ಈ ಬಗ್ಗೆ ರಾಜ್ಯ ದ ಸಂಸದರು ದನಿ ಎತ್ತುತ್ತಿಲ್ಲ ಎಂದು ಶಾಸಕ ರಘುಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯನ್ನು ರಾಷ್ಟಿçÃಯ ನೀರಾವ ರಿ ಯೋಜನೆ ಎಂದು ಪರಿಗಣಿಸಿ ೬೦:೪೦ ಅನುಪಾತದಲ್ಲಿ ಅನುದಾನ ನೀಡುವ ಭರವಸೆ ಮರೀಚಿಕೆಯಾಗಿದೆ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.
ಯೋಜನೆಯ ಬೃಹತ್ ಸ್ವರೂಪ ಹಾಗೂ ಆರ್ಥಿಕ ಪ್ರಗತಿ: ಸರ್ಕಾರದ ಮಾಹಿತಿ ಪ್ರಕಾರ, ಇದು ೫.೫೭ ಲಕ್ಷ ಎಕರೆ (೨,೨೫,೫೧೫ ಹೆಕ್ಟೇರ್) ಪ್ರದೇ ಶಕ್ಕೆ ೨೯.೯೦ ಟಿ.ಎಂ.ಸಿ ನೀರನ್ನು ಬಳಸಿ ಸೂಕ್ಷ÷್ಮ ನೀರಾವರಿ ಕಲ್ಪಿಸುವ ಬೃಹತ್ ಯೋಜನೆಯಾಗಿದೆ. ಇದರ ಜೊತೆಗೆ ೩೬೭ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.೫೦ರಷ್ಟು ನೀರನ್ನು ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಒಟ್ಟು ೨೧,೪೭೩.೬೭ ಕೋಟಿ ರೂ.ಗಳ ಪರಿಷ್ಕöÈತ ಆಡಳಿ ತಾತ್ಮಕ ಅನುಮೋದನೆ ನೀಡಲಾಗಿದ್ದು, ಫೆಬ್ರವರಿ-೨೦೨೬ರ ಅಂತ್ಯದ ವೇಳೆಗೆ ಒಟ್ಟಾರೆ ೧೧,೩೭೫.೦೨ ಕೋಟಿ ರೂ. ವೆಚ್ಚ ಮಾಡಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಭೂಸ್ವಾಧೀನ ಬಿಕ್ಕಟ್ಟು ಅಂತ್ಯ; ಅಕ್ಟೋಬರ್ನಿಂದ ‘ಟ್ರಯಲ್ ರನ್’ಕಾ ಮಗಾರಿಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಸಮಸ್ಯೆಗಳನ್ನು ಲೋಕ್ಅದಾ ಲತ್ ಮೂಲಕ ಸುಖಾಂತ್ಯಗೊಳಿಸಲಾಗಿದೆ.ಚಿತ್ರದುರ್ಗ ಶಾಖಾಕಾಲುವೆ : ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ ೪೪ ಎಕರೆ ೨೦ ಗುಂಟೆ ಜಮೀನಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗೋನೂರು ಅಕ್ವಾಡಕ್ಟ್ ಕಾಮಗಾರಿ ಮುಗಿದ ಬಳಿಕ, ಅಕ್ಟೋಬರ್-೨೦೨೬ರ ಅಂತ್ಯ ಕ್ಕೆ ಚಿತ್ರದುರ್ಗ ಶಾಖಾ ಕಾಲುವೆಯ ಅಂತಿಮ ಭಾಗಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲು ಉದ್ದೇಶಿಸಲಾಗಿದೆ. ಈ ವೇಳೆ ವೈ-ಜಂಕ್ಷನ್ ನಿಂದ ಬರುವ ೯೦ ಕೆರೆಗಳಿಗೆ ಶೇ.೫೦ರಷ್ಟು ನೀರು ತುಂಬಿಸಲಾಗುವುದು.
ತುಮಕೂರು ಶಾಖಾ ಕಾಲುವೆ: ಕಾಟಿಗನೆರೆ, ಸೋಪುರ ಮತ್ತು ಚಿಣ್ಣಾಪುರ ಗ್ರಾಮಗಳ ೧೧೦ ಎಲ್.ಎ.ಸಿ ಪ್ರಕರಣಗಳನ್ನು ಸಹ ಬಗೆಹರಿಸಿಕೊಂ ಡು ಭೂಪರಿಹಾರ ವಿತರಿಸಲಾಗುತ್ತಿದೆ.ಮೇ ತಿಂಗಳಲ್ಲಿ ತರೀಕೆರೆ ಏತನೀ ರಾವರಿ ಲೋಕಾರ್ಪಣೆ.ಹಂಚಿಕೆಯಾದ ೨.೦೬ ಟಿಎಂಸಿ ನೀರನ್ನು ಬಳಸಿ ತರೀಕೆರೆ ತಾಲೂಕಿನ ೭೬ ಕೆರೆಗಳಿಗೆ ಈಗಾಗಲೇ ನೀರು ತುಂಬಿಸಲಾಗಿ ದ್ದು,ಮೇ-೨೦೨೬ರ ಅಂತ್ಯಕ್ಕೆ ಈ ಯೋಜನೆಯನ್ನು ಅಧಿಕೃತವಾಗಿಲೋ ಕಾರ್ಪಣೆ ಮಾಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ಕೆರೆ ತುಂಬಿಸುವ ಹಾಗೂ ಕಾಲುವೆ ಕಾಮಗಾರಿಗಳ ಮುನ್ನೋಟ:ಚಳ್ಳಕೆ ರೆ ಮತ್ತು ಮೊಳಕಾಲ್ಮೂರು: ೭೧ ಕೆರೆಗಳನ್ನು ತುಂಬಿಸುವ ೭೧೦ ಕೋಟಿ ರೂ. ವೆಚ್ಚದ ಕಾಮಗಾರಿ ಅಕ್ಟೋಬರ್-೨೦೨೬ಕ್ಕೆ ಪೂರ್ಣ,ಹೊಳಲ್ಕೆರೆ: ೨೧ ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿ ವೆ.ಚಿಕ್ಕನಾಯಕನಹಳ್ಳಿ ಹಾಗೂ ಶಿರಾ: ೬೦ ಕೆರೆಗಳನ್ನು ತುಂಬಿಸುವ ಕಾರ್ಯ ಡಿಸೆಂಬರ್-೨೦೨೬ಕ್ಕೆ ಪೂರ್ಣ.ಶಾಖಾ ಕಾಲುವೆಗಳು: ಚಿತ್ರದುರ್ಗ (ರೂ.೧,೮೪೮ ಕೋಟಿ), ತುಮಕೂರು (ರೂ.೩,೮೦೬ ಕೋಟಿ) ಹಾಗೂ ಜಗಳೂರು (ರೂ.೧,೫೬೮ ಕೋಟಿ) ಶಾಖಾ ಕಾಲುವೆಗಳ ಕಾಮಗಾರಿಗ ಳು ಭರದಿಂದ ಸಾಗುತ್ತಿವೆ. ಚಿತ್ರದುರ್ಗ ಶಾಖಾ ಕಾಲುವೆಯಡಿ ೨,೬೭೭ ಕೋಟಿ ರೂ. ವೆಚ್ಚದ ಸೂಕ್ಷ÷್ಮ ನೀರಾವರಿ ಕಾಮಗಾರಿಗಳೂ ಪ್ರಗತಿಯಲ್ಲಿವೆ.
ಅರಣ್ಯ ತೀರುವಳಿಯೇ ಅಡ್ಡಿ; ೨೦೨೮ಕ್ಕೆ ಸಂಪೂರ್ಣ ಮುಕ್ತಾಯಪ್ರಸ್ತು ತ ಅರಣ್ಯ ಇಲಾಖೆಯ ಕೆಲವು ತೀರುವಳಿಗಳು ಬಾಕಿ ಇರುವುದರಿಂದ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿದೆ. ಕೇಂದ್ರದಿAದ ಅನುದಾನ ಬಾರ ದಿದ್ದರೂ, ಇದೊಂದು ಕುಡಿಯುವ ನೀರಿನ ಯೋಜನೆಯಾಗಿರುವುದ ರಿಂದ ರಾಜ್ಯ ಸರ್ಕಾರವೇ ಹಣ ಒದಗಿಸುತ್ತಿದೆ. ಅರಣ್ಯ ಇಲಾಖೆಯ ತೊಡಕುಗಳನ್ನು ಶೀಘ್ರವೇ ನಿವಾರಿಸಿ೨೦೨೭೨೮ನೇಸಾಲಿನಲ್ಲಿ(ಮಾರ್ಚ್ ೨೦೨೮ರ ಅಂತ್ಯಕ್ಕೆ) ಸಂಪೂರ್ಣ ಯೋಜನೆಯನ್ನು ಲೋಕಾರ್ಪಣೆಮಾ ಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸದನಕ್ಕೆ ದೃಢ ಭರ ವಸೆ ನೀಡಿದರು.
ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ



