ಬೆಂಗಳೂರು: ಆಡುಗೋಡಿಯ ಸಿಆರ್ ಸೌತ್ ಪೆರೇಡ್ ಗ್ರೌಂಡ್ ನಲ್ಲಿ ಇಂದು ಬೆಳಿಗ್ಗೆ ನಡೆದ ಪೊಲೀಸ್ ಆಯುಕ್ತರ ಸೇವಾ ಕವಾಯಿತಿನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಒಂದನೇ ಸ್ವೀಕರಿಸಿ ವಿವಿಧ ಪ್ರಕರಣಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ 85 ಜನ ಪೊಲೀಸ್ ಸಿಬ್ಬಂದಿಗೆ ಪ್ರಶಂಷನಾ ಪತ್ರ ನೀಡಿದ ನಂತರ ನಂತರ ಮಾತನಾಡಿದ.
ಪೊಲೀಸ್ ಆಯುಕ್ತ ಬಿ ದಯಾನಂದರವರು ಈ ಕನ್ನಡ ರಾಜ್ಯೋತ್ಸವ ಸುವರ್ಣ ಸಮಾರಂಭದಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 20 ವರ್ಷಗಳ ಹಿಂದೆ ನಡೆದಿದ್ದ ಘೋರ ಅಪರಾಧಗಳಲಿ ತಲೆಯ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿರುವುದು ಮತ್ತು ಮನೆಗಳ್ಳತನ, ವಾಹನಗಳ್ಳತನ, ದರೋಡೆ, ಸರಗಳ್ಳತನ, ಫೋಕ್ಸೋ ಅತ್ಯಾಚಾರ ಹಾಗೂ ಇತರೆ ಪ್ರಕರಣಗಳಲ್ಲಿ ಉತ್ತಮವಾದ ಪತ್ತೆ ಕಾರ್ಯವನ್ನು ನಮ್ಮ ಬೆಂಗಳೂರು ನಗರ ಪೊಲೀಸರು ಮಾಡಿರುತ್ತಾರೆ. ಇನ್ನು ಮುಂದೆ ಇದೇ ತರ ಪ್ರಕರಣಗಳನ್ನು ಪತ್ತೆ ಹಚ್ಚಿದರೆ ಹತ್ತು ಸಾವಿರ ನಗದು ಬಹುಮಾನವನ್ನು ಸಹ ನೀಡಲಾಗುವುದೆಂದು ಘೋಷಿಸಿದರು.
ಎಲ್ಲಾ ಪೊಲೀಸ್ ಠಾಣೆಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸ ಬೇಕೆಂದು ಆದೇಶಿಸಿದರು ಹಾಗೂ ವಿವಿಧ ವಿಭಾಗಗಳಲ್ಲಿ ಉದಾ ಹರಣೆಗೆ ಗನ್ ಮ್ಯಾನ್ ಹಾಗೂ ಇತರೆ ಪೊಲೀಸ್ ಕೆಳಹಂತದ ಸಿಬ್ಬಂದಿಗಳಿಗೆ ಸರಿಯಾಗಿ ಸೆಲ್ಯೂಟ್ ಮಾಡಲು ಸಹ ಬರುತ್ತಿಲ್ಲವೆಂದು ತಿಳಿಸಿದರು.
ಇನ್ನು ಮುಂದೆ ಇಂತಹ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಪೆರೇಡ್ಗೆ ಕರೆ ತರಬೇಕೆಂದು ಆದೇಶಿಸಿದರು. ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಅಪರಾಧ ಪ್ರಕರಣ ಮಾಸವನ್ನು ಸಹ ಆಚರಿಸಲಾಗುವುದು ಇದರಲ್ಲಿ ಭಾಗವಹಿಸುವ ಎಲ್ಲಾ ತನಿಖಾಧಿಕಾರಿಗಳು ಹಾಗೂ ಇತರೆ ಚಟುವಟಿಕೆಗಳಲಿ ಗೆದ್ದ ಅಭ್ಯರ್ಥಿಗಳಿಗೆ ರೋಲಿಂಗ್ ಟ್ರೋಫಿಗಳನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.
ಇದೇ ತಿಂಗಳ 16,17, 18 ರಂದು ಬೆಂಗಳೂರು ನಗರ ಪೊಲೀಸ್ ಕ್ರೀಡಾಕೂಟವನ್ನು ಸಹ ಏರ್ಪಡಿಸಲಾಗಿರುತ್ತದೆ. ಪೊಲೀಸ್ ಕ್ರೀಡಾಕೂಟಕ್ಕೆ ಗೃಹ ಮಂತ್ರಿ ಪರಮೇಶ್ವರ್ ಅವರನ್ನು ಸಹ ಆಹ್ವಾನಿಸಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರುಗಳಾದ ಸತೀಶ್ ಕುಮಾರ್, ರಮಣ್ ಗುಪ್ತ ಹಾಗೂ ಎಲ್ಲಾ ಡಿಸಿಪಿ ಎಸಿಪಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.