ಬೆಂಗಳೂರು: ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ “ಸೇವಾ ಯೋಧ ರತ್ನ” ರಾಜ್ಯ ಪ್ರಶಸ್ತಿ ಪ್ರಧಾನ ಸಮಾ
ರಂಭವನ್ನು ವಿಜಯನಗರದ ಆದಿಚುಂಚನಗಿರಿ ಮಹಿಳಾ ಸಂಘದ ಮಿನಿ ಸಭಾಂಗಣದಲ್ಲಿ ಸರಳವಾಗಿ, ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕರ್ನಾಟಕ ಸರ್ಕಾರದ ನೆಹರು ಯುವ ಕೇಂದ್ರದ ಸದಸ್ಯತ್ವ ಮತ್ತು ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆದಿರುವ ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್ (ರಿ) ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕ್ರೀಡೆ ,ಸಿನಿಮಾ, ಕಲೆ, ಸಾಹಿತ್ಯ,ನೃತ್ಯ ,ಮಾಧ್ಯಮ, ರಂಗಭೂಮಿ, ವೈದ್ಯಕೀಯ, ಶಿಕ್ಷಣ, ಮಹಿಳಾ ಸಬಲೀಕರಣ ಮುಂತಾದ ವಿವಿಧ ಕ್ಷೇತ್ರದ 50 ಸಾಧಕರಿಗೆ ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿಯನ್ನು ಕನ್ನಡ ಧ್ವಜ,
ಕನ್ನಡ ಶಾಲು ಮತ್ತು ಪ್ರಶಸ್ತಿ ಪತ್ರದೊಂದಿಗೆ ಪುಷ್ಪ ಗೌರವವನ್ನು ನೀಡಿ, ಸನ್ಮಾನಿಸಿ ಪುರಸ್ಕರಿಸಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಡಾ. ಕರಾಟೆ ಎ.ಪಿ .ಶ್ರೀನಾಥ್ ರವರು ನಾಲ್ಕು ಬಾರಿ ಗಿನ್ನಿಸ್ ದಾಖಲೆ ಪಡೆದ ಸಾಧಕರು ಅವರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ಅಧ್ಯಕ್ಷತೆಯ ಆತ್ಮಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಕ್ರಮದ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ದಿವ್ಯಸಾನಿಧ್ಯವನ್ನು ಡಾ. ಸಂಪತ್ ವೇಣುಗೋಪಾಲ ಆಚಾರ್ಯರವರ ವಹಿಸಿದ್ದರು. ಅಧ್ಯಕ್ಷತೆಯನ್ನು ಕರ್ನಾಟಕ ಪ್ರೇಸ್ ಕ್ಲಬ್
ಕೌನ್ಸಿಲ್ ನ ಅಧ್ಯಕ್ಷರಾದ ಡಾ. ಶಿವಕುಮಾರನಾಗರನವಿಲೆವಹಿಸಿದ್ದರು .ಉದ್ಘಾಟನೆಯನ್ನು ಬಹುಭಾಷಾ ಚಿತ್ರ ನಟಿಕುಮಾರಿ ಭೂಮಿಕಾ
ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯೂತ್ ವೆಲ್ಫೇರ್ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಡಾ. ಶ್ರೀನಿವಾಸ್ .ಸಿ, ಶ್ರೀ ವೆಂಕಟೇಶ ಪೈ, ಡಾ. ಕರುಣಾವೀರ ಕೆಂಪಯ್ಯ,ಡಾ.ಕಮಲಾ ಕಣ್ಣನ್ ಮುಂತಾದವರು ಭಾಗಿಯಾಗಿದ್ದರು.
ರಾಜ್ಯವ್ಯಾಪಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮಕಾರ್ಯ ನಿರ್ವಹಿಸುತ್ತಿರುವ, ಮತ್ತು ನಾಡು ನುಡಿಗಾಗಿ ಶ್ರಮಿಸುತ್ತಿರುವ ಸಾಧಕರನ್ನು ಪರಿಗಣಿಸಿ ಈಗಾಗಲೇಸುಮಾರು ಐದು ಸಾವಿರ ಜನರಿಗೆ ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.