ಕ್ಷೇತ್ರದ ಸಾಣೆಗುರುವನ ಹಳ್ಳಿಯಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಕ್ರೀಡಾಂಗಣ ಹಾಗೂ ಕಿರು ಅರಣ್ಯ ಸಂಸ್ಥಾಪಕರು ಮತ್ತು ಬಿಬಿಎಂಪಿ ನಿಕಟಪೂರ್ವ ಸದಸ್ಯರಾದ ಎಸ್. ಹೆಚ್. ಪದ್ಮರಾಜ್ ಅವರ ನೇತೃತ್ವದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ವಿರೂಪಾಕ್ಷ ಕನ್ನಡ ಯುವಕರ ಸಂಘದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 42ನೇ ವರ್ಷದ ಪಾದಯಾತ್ರೆಗೆ ಹೊರಡಲು ಮಹಾಪೂಜೆ ಮಾಡಲಾಯಿತು.
ಬೇಲೂರುನಿಂದ ಹೊರತು ಇವತ್ತು ಕೊಟ್ಟಿಗೇಹಾರ ದಿಂದ ಪಾದಯಾತ್ರೆ ಮುಂದುವರಿಸಲಾಯಿತು.ಪೂಜೆ ಸಲ್ಲಿಸಿ ನಂತರ ಮಾತನಾಡಿದ ಎಸ್. ಹೆಚ್. ಪದ್ಮರಾಜ್ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 42 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ್ ಸ್ವಾಮಿಯ ದರ್ಶನಕ್ಕೆ ಕಾಲು ನಡಿಗೆಯಲ್ಲಿ ಹೋಗುತ್ತಿದ್ದೇನೆ. ಕ್ಷೇತ್ರದ ಜನರ ಆರೋಗ್ಯ.
ಸುಖ ಸಂತೋಷ ಹಾಗೂ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿ ಮಾಡಲು ಮಂಜುನಾಥನ ಸನ್ನಿಧಿಗೆ ಹೋಗಿ ಕೇಳಿಕೊಂಡು ಬರುತ್ತೇನೆ. ಆ ಭಗವಂತ 4ಬಾರಿ ಬಿಬಿಎಂಪಿ ಸದಸ್ಯನಾಗಿ ಆಶೀರ್ವಾದ ಮಾಡಿದ್ದಾರೆ. ಇದ್ರಿಂದ ಕ್ಷೇತ್ರದ ವಿದ್ಯಾರ್ಥಿಗಳಿಗೆ, ಬಡವರಿಗೆ. ಮಧ್ಯಮ ವರ್ಗದ ಜನರಿಗೆ ವೃದ್ಧರಿಗೆ ಎಲ್ಲ ರೀತಿಯ ಸೌಕರ್ಯಗಳು ನೀಡಲು ಸಾಧ್ಯವಾಗಿದೆ.
ಸರ್ಕಾರದಿಂದ ಹಾಗೂ ನನ್ನ ವಯಕ್ತಿಕವಾಗಿ ಜನರಿಗೆ ಎಲ್ಲ ಸಂಕಷ್ಟ ಸಮಯದಲ್ಲೂ ಸೇವೆ ನೀಡಲಾಗಿದೆ. ಲೋಕ ಕಲ್ಯಾಣಕ್ಕೆ ಎಂದು ಪ್ರತಿವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಹೋಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಪದ್ಮರಾಜ್ ಹೇಳಿದ್ರು, ಹಲವು ಗಣ್ಯರು ಹಾಗೂ ಭಕ್ತರು ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆದುಕೊಂಡರು.