ಹರಿಹರ: ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರ ಉಚಿತ ಆರೋಗ್ಯಸೇವೆ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ತಿಳಿಸಿದರು.
ಸಮೀಪದ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಜಾತ್ರೆ-2024 ಶ್ರೀಮಠದ 26 ನೇ ವಾರ್ಷಿಕೋತ್ಸವ,ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 17 ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 16 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದಲ್ಲಿ ನೌಕರರ ಗೋಷ್ಟಿಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಹಲವಾರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವುದು ಈಗ ಸರ್ವೇಸಾಮಾನ್ಯ ವೈದ್ಯಕೀಯ ವೆಚ್ಚಕ್ಕೆ ಲಕ್ಷಾಂತರ ರೂಪಾಯಿ ಗಳನ್ನು ಖರ್ಚು ಮಾಡುವ ಅನಿವಾರ್ಯತೆ ನೌಕರರಿಗೆ ಇದೆ.ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಮಾತನಾಡಿ ಉಚಿತ ಆರೋಗ್ಯ ಸೇವೆಯನ್ನು ನೀಡುವಂತೆ ಮನವಿ ಮಾಡಿದ್ದೇವೆ ಸದ್ಯದಲ್ಲಿಯೇ ಆದೇಶ ಹೊರಬೀಳುವ ನಿರೀಕ್ಷೆ ಇದೆ ಮುಖ್ಯಮಂತ್ರಿಗಳು ಈ ವಿಚಾರವಾಗಿ ಪೂರಕ ಸ್ಪಂದನೆ ನೀಡಿರುತ್ತಾರೆ ಎಂದು ಹೇಳಿದರು.
ಪ್ರಸ್ತುತ ದಿನದಲ್ಲಿ ಸರ್ಕಾರಿ ನೌಕರರು ಅಧಿಕ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕಳೆದ 30 ವರ್ಷಗಳ ಹಿಂದೆ ರಾಜ್ಯದ ಜನಸಂಖ್ಯೆ 4.5 ಕೋಟಿ ಇದ್ದಾಗ 7.50 ಲಕ್ಷ ಜನ ನೌಕರರಿದ್ದರು. ಈಗ 6.5 ಕೋಟಿ ಜನಸಂಖ್ಯೆ ಇದೆ ಆದರೆ ನೌಕರ ಸಂಖ್ಯೆ 5.10 ಲಕ್ಷ ಜನ ಮಾತ್ರ ಇದ್ದಾರೆ. 2.60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಇವುಗಳನ್ನು ಭರ್ತಿ ಮಾಡುವ ಕೆಲಸ ಆಳಿದ ಸರ್ಕಾರಗಳು ಮಾಡುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸಾರ್ವಜನಿಕರು ಮರೆಯಬಾರದು.
ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಗುಣಮಟ್ಟದ ತಾಂತ್ರಿಕ ತರಬೇತಿ ಇಲ್ಲದೆ ನೌಕರರು ಒತ್ತಡದಲ್ಲಿ ಕೆಲಸ ನಿಭಾಯಿ ಸುತ್ತಿದ್ದಾರೆ.ಸರ್ಕಾರಗಳು ಕೂಡಲೇ ನೌಕರರಿಗೆ ಗುಣಮಟ್ಟದ ತಾಂತ್ರಿಕ ತರಬೇತಿ ನೀಡುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರದ ಪೋಲಿಸ್ ಇಲಾಖೆಯಲ್ಲಿ ನೌಕರರಿಗೆ ಭಡ್ತಿ ನೀಡುವ ಸಂದರ್ಭದಲ್ಲಿ ಸರಳವಾಗಿ ನೀಡಲಾಗುತ್ತದೆ.
ಆದರೆ ಸರ್ಕಾರಿ ನೌಕರರಿಗೆ ಭಡ್ತಿ ನೀಡುವಾಗ ಹಲವಾರು ವಿಶೇಷತೆಗಳನ್ನು ಪರೀಕ್ಷಿಸಲಾಗುತ್ತದೆ. ಸದ್ಯ ಇರುವ ನಿಯಮಾವಳಿಗಳನ್ನು ಸರಳೀಕರಣ ಗೊಳಿಸಬೇಕು ಎನ್ನುವುದನ್ನು ಸರ್ಕಾರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಇಷ್ಟೆಲ್ಲಾ ಒತ್ತಡದಲ್ಲಿ ಕರ್ತವ್ಯ ನಿರ್ಮಿಸುತ್ತಿರುವ ನಮ್ಮ ರಾಜ್ಯ ಸರ್ಕಾರಿ ನೌಕರರ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದಲ್ಲಿ ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ 6ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹದಲ್ಲಿ 2 ನೇ ಸ್ಥಾನದಲ್ಲಿದೆ ಎಂಬುದನ್ನು ನಮ್ಮ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.
ಸಂಘದ ಪ್ರಯತ್ನದ ಫಲವಾಗಿ ವೇತನ ಭತ್ಯೆ ಗಳ ವಿಳಂಬ ತಪ್ಪಿದೆ ಸೇವಾ ಸೌಲತ್ತುಗಳ ವಿಚಾರವಾಗಿ ಸರಲೀಕರವಾಗಿಸುವಲ್ಲಿ ಯಶಸ್ವಿಯಾಗಿದೆ.ಸಂಘ ಬರಿ ಸರ್ಕಾರಿ ಕೆಲಸಗಳನ್ನು ನಿಭಾಯಿಸುವ ಜೊತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ಸಹ ಮಾಡುತ್ತಿದೆ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ಸರ್ಕಾರದ ಆದೇಶದಂತೆ ದಿನವಿಡಿ ಕೆಲಸ ಮಾಡುತ್ತಿದೆ ಕೋವಿಡ್ ಸಂದರ್ಭದಲ್ಲಿ ಒಂದು ದಿನದ ವೇತನ 200 ಕೋಟಿ ರೂ,ಗಳು ಮತ್ತು ಪ್ರಭಾವ ಸಂದರ್ಭದಲ್ಲಿ ಎರಡು ನೂರು ಕೋಟಿ ಹಾಗೂ ಹಸುಗಳ ಸಂರಕ್ಷಣೆಗೆ 50 ಕೋಟಿ ಹೀಗೆ ಕೋಟಿಗಟ್ಟಲೆ ಹಣವನ್ನು ಸರ್ಕಾರಕ್ಕೆ ದೇಣಿಗೆ ನೀಡಿದೆ ಎಂಬ ವಿವರಣೆ ನೀಡಿದರು.
ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಸರ್ಕಾರಕ್ಕೆ ಮುಜುಗರ ತರದೆ ನಮ್ಮ ನೌಕರರು ಸೇವೆ ಮಾಡುತ್ತಿದ್ದಾರೆ ಇದೇ ಫೆಬ್ರವರಿ 27ರಂದು ರಾಜ್ಯ ಸರ್ಕಾರಿ ನೌಕರರ ಸಮ್ಮೇಳನ ನಡೆಯುತ್ತಿದ್ದು ಅಲ್ಲಿ ಮುಖ್ಯಮಂತ್ರಿ ಗಳು ಆಗಮಿಸುತ್ತಿದ್ದಾರೆ ಆ ಸಂದರ್ಭದಲ್ಲಿ ನಮ್ಮ ಬೇಡಿಕೆಗಳೆಲ್ಲ ಈಡೇರುವ ಆಶಾಭಾವನೆ ನಮ್ಮಲ್ಲಿದೆ ಎಂದು ಹೇಳಿದರು.
ನೌಕರರ ಗೋಷ್ಠಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.ಅಧ್ಯಕ್ಷತೆ ಯನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ವಹಿಸಿದ್ದರು.ಈ ಸಮಯದಲ್ಲಿ ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್,ಬೆಳಗಾವಿ ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜು ನಾಥ್ ಅಗ್ನಿಶಾಮಕ ಮತ್ತು ತುತ್ತು ಸೇವೆಗಳ ಡಿಐಜಿ ರವಿ ಡಿ. ಚನ್ನಣ್ಣನವರ್ ಸೇರಿದಂತೆ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.