ಪಾಕಿಸ್ತಾನ ತಂಡ, ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ದ ಹೀನಾಯವಾಗಿ ಸೋಲುಂಡಿತ್ತು. ಮ್ಯಾಚೂ ಹೋಯಿತು, ಮರ್ಯಾದೆಯೂ ಹೋಯಿತು
ಎನ್ನುವ ಹಾಗೇ, ಭಾರತದ ಆಟಗಾರರು, ಪಾಕಿಸ್ತಾನದ ಆಟಗಾರರ ಹಸ್ತಲಾಘವವೂ ಮಾಡದೇ ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದರು. ಅಂತರರಾಷ್ಟಿçÃಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ
ಭಾರತ ತಂಡ ಮಾಡಿದ ಉದ್ದೇಶಪೂರ್ವಕ ಅವಮಾನವಿದು ಎಂದು ಪಾಕಿಸ್ತಾನದವರು ಬೊಬ್ಬೆ ಇಡುತ್ತಿದ್ದಾರೆ. ಇದರ ಭಾಗವಾಗಿ, ಪಾಕಿಸ್ತಾನ ತಂಡದ ಮಾಜಿ ನಾಯಕ ಶಹೀದ್
ಅಫ್ರಿದಿ, ಭಾರತದ ವಿರುದ್ದ, ಅದರಲ್ಲೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಹೆಚ್ಚಿನ ಮಾಜಿ ಆಟಗಾರರು, ಭಾರತವನ್ನು ಟೀಕಿಸುವ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ. ಆದರೆ, ಅವರ ಟೀಕೆಗಳು ಕ್ರೀಡೆಗೆ ಸೀಮಿತವಾಗಿದ್ದರೆ, ಅಫ್ರಿದಿ
ಅಧಿಕ ಪ್ರಸಂಗ ತುಸು ಜಾಸ್ತಿಯೇ. ಕ್ರೀಡೆ ಜೊತೆಗೆ ರಾಜಕೀಯ ಬೆರೆಸಿ ಮಾತನಾಡುವ ವ್ಯಕ್ತಿ ಈತ. “ಕೊಳಕು ಮನಸ್ಥಿತಿಯ ಮೈಂಡ್ ಸೆಟ್ ಇರುವವರು ಇಂತಹ ಕೆಲಸವನ್ನು ಮಾಡುತ್ತಾರೆ.
ಅವರು (ನರೇಂದ್ರ ಮೋದಿ) ಯಾವತ್ತಿನವರೆಗೆ ಅಧಿಕಾರದಲ್ಲಿ ಇರುತ್ತಾರೋ, ಈ ರೀತಿಯ ವಿದ್ಯಮಾನಗಳು ಮುಂದುವರಿಯುತ್ತಲೇ ಇರುತ್ತದೆ” ಎಂದು ಅಫ್ರಿದಿ ಹೇಳಿದ್ದಾರೆ. ಪಾಕಿ ಸ್ತಾನದ ಟಿವಿಯ ಸಂವಾದದಲ್ಲಿ ಮಾತನಾಡುತ್ತಾ, ಅಫ್ರಿದಿ ಈ ಮಾತನ್ನು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡುವುದಾದರೆ, ಅವರೊಬ್ಬ ಪಾಸಿಟಿವ್ ಮೈಂಡ್ ಸೆಟ್ ಇರುವ ರಾಜಕಾರಣಿ. ಮಾತುಕತೆಯ ಮೂಲಕ, ಎಲ್ಲರ ಜೊತೆ ಬೆರೆತು ಮುಂದಕ್ಕೆ ಹೋಗಲು ಬಯಸುತ್ತಾರೆ. ಆದರೆ, ಅವರು (ಮೋದಿ) ಪಾಕಿಸ್ತಾನವನ್ನು ಇಸ್ರೇಲ್ ಅಥವಾ ಗಾಜಾದ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಶಹೀದ್ ಅಫ್ರಿದಿ ಕಿಡಿಕಾರಿದ್ದಾರೆ. ಇನ್ನು, ಭಾರತದ ವಿರುದ್ದ ಸೋತಿದ್ದಕ್ಕೆ, ಪಾಕಿಸ್ತಾನದಲ್ಲಿ ಟಿವಿ ಒಡೆದು ಹಾಕುವ ಸಂಪ್ರದಾಯ ಮುಂದುವರಿದಿದೆ. ಇನ್ನು, ಅಫ್ರಿದಿ ಹೇಳಿಕೆಯ ಟ್ವೀಟಿಗೆ ಹಲವು ಕಾಮೆಂಟುಗಳು ಬAದಿವೆ. ರಾಹುಲ್ ಗಾಂಧಿ ಕೂಡಾ ಭಾರತ ವಿರೋಧಿಗಳು ಮಾತನಾಡುವ ರೀತಿಯಲ್ಲಿ ಮಾತನಾಡುತ್ತಾರೆ. ಹಾಗಾಗಿ, ಅಫ್ರಿದಿಗೆ ರಾಹುಲ್ ರಾಜಕಾರಣ, ಸರಿ ಅನಿಸಿರಬಹುದು ಎನ್ನುವ ವ್ಯಂಗ್ಯ ಕಾಮೆಂಟೂ ಬಂದಿವೆ.
ಹಫೀಜ್ ಸಯೀದ್ ನಂತರ ಶಹೀದ್ ಅಫ್ರಿದಿ, ಈಗ ರಾಹುಲ್ ಗಾಂಧಿಯವರನ್ನು ಹೊಗಳುತ್ತಿದ್ದಾರೆ, ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾರತ ವಿರೋಧಿಗಳು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಜೊತೆ ಒಡನಾಟವನ್ನು ಹೊಂದಿರುತ್ತಾರೆ ಎಂದು ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲ ವ್ಯಂಗ್ಯವಾಡಿದ್ದಾರೆ.