ಬ್ಯಾಟಿಂಗ್ ನಲ್ಲಿ ತಿಣುಕಾಡಿದರೂ ಬೌಲಿಂಗ್ ನಲ್ಲಿ ಉತ್ತಮ ಪ್ರರ್ಶನ ತೋರಿದ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಯುಎಇ ವಿರುದ್ಧ ೪೧ ರನ್ ಗಳ ರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ಏಷ್ಯಾ ಕಪ್ ನ ಸೂಪರ್ ಸಿಕ್ಸ್ ಹಂತಕ್ಕೆ ಎ ಬಣದ ೨ನೇ ತಂಡವಾಗಿ ಪ್ರವೇಶಿಸಿದೆ. ಯುಎಇ ಮತ್ತು ಪಾಕಿಸ್ತಾನ ತಂಡಗಳನ್ನು ಸೋಲಿಸಿರುವ ಭಾರತ ತಂಡ ಈಗಾಗಲೇ ಮೊದಲನೇ ತಂಡವಾಗಿ ಸೂಪರ್ ೪ ಹಂತಕ್ಕೆ ಪ್ರವೇಶಿಸಿತ್ತು. ಉತ್ತಮ ಹೋರಾಟ ನೀಡಿದ ಆತಿಥೇಯ ಯುಎಇ ಕೇವಲ ೨ ಅಂಕಗಳೊಂದಿಗೆ ಈ ಟರ್ನಿಯ ಅಭಿಯಾನವನ್ನು ಮುಗಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧ ವಾರ ನಡೆದ ಏಷ್ಯಾ ಕಪ್ ಎ ಬಣದ ಪಂದ್ಯದಲ್ಲಿ ಮೊದ ಲು ಬ್ಯಾಟಿಂಗ್ ಆಯ್ದುಕೊಂಡಪಾಕಿಸ್ತಾನ ತಂಡ ನಿಗದಿತ ೨೦ ಓವರ್ ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೪೬ ರನ್ ಕಲೆ ಹಾಕಿತ್ತು. ಇದನ್ನು ಬೆಂಬತ್ತಿ ಹೊರಟ ಯುಎಇ ತಂಡದ ೧೭.೪ ಓವರ್ ಗಳಲ್ಲಿ ೧೦೫ ರನ್ ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಶಾಹಿನ್ ಶಾ ಅಫ್ರಿದಿ ಅವರು ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
ಐಸಿಸಿ ಮ್ಯಾಚ್ ರೆಫ್ರಿ ಆ?ಯಂಡಿ ಪೈಕಾಫ್ಟ್ಅವರನ್ನು ಏಷ್ಯಾ ಕಪ್ ನಿಂದ ವಜಾಗೊಳಿಸದೇ ಇದ್ದಲ್ಲಿ ಯುಎಇ ವಿರುದ್ದ ಬಹಿಷ್ಕಾರ ಹಾಕುವುದಾಗಿ ಪಾಕಿಸ್ತಾನ ತಂಡ ಹೈಡ್ರಾಮಾ ಮಾಡಿತ್ತು. ಕೊನೆಗೆ ಪಂದ್ಯವನ್ನು ಆಡಲು ಮುಂದಾಯಿತು. ಹೀಗಾಗಿ ತಡವಾಗಿ ಪ್ರಾರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡದ ಆರಂಭ ನಿರೀಕ್ಷೆಯಂತೆ ಸಾಗಲಿಲ್ಲ. ಭಾರತ ವಿರುದ್ಧ ಸೊನ್ನೆ ಸುತ್ತಿದ್ದ ಆರಂಭಕಾರ ಸಯೀಮ್ ಆಯೂಬ್ ಯುಎಇ ವಿರುದ್ದ ಖಾತೆ ತೆರೆಯುವ ಮುನ್ನವೇ ಔಟಾದರು. ಮತ್ತೊಬ್ಬ ಆರಂಭಕಾರ ಸಬೀಮ್ ಝಾದಾ ರ್ಹಾನ್( ೫ ರನ್) ಅವರು ಸಹ ಹೆಚ್ಚು ಹೊತ್ತು ಕ್ರೀಸಿನಲ್ಲಿ ನೆಲೆ ನಿಲ್ಲಲಿಲ್ಲ. ಹೀಗಾಗಿ ತಂಡದ ಮೊತ್ತ ೯ ಆಗುವ ವೇಳೆಗಾಗಲೇ ಪಾಕ್ ನ ಎರಡು ವಿಕೆಟ್ ಗಳು ಉರುಳಿದ್ದವು.
ಈ ಹಂತದಲ್ಲಿ ಅನುಭವಿ ಫಖರ್ ಝಮಾನ್ ಮತ್ತು ನಾಯಕ ಸಲ್ಮಾನ್ ಆಘಾ ಅವರು ತಾಳ್ಮೆಯಿಂದ ಕುಸಿತ ತಪ್ಪಿಸಿದರು. ಇರಿಬ್ಬರು ೬೧ ರನ್ ಗಳ ಜೊತೆಯಾಟವಾಡಿದರು. ತಂಡದ ಮೊತ್ತ ೭೧ ಆಗಿರುವಾಗ ಸಲ್ಮಾನ್ ಆಘಾ(೨೦ ರನ್) ಅವರನ್ನು ಹೈದರ್ ಅಲಿಗೆ ಕ್ಯಾಚ್ ಕೊಡಿಸುವಲ್ಲಿ ಪರಾಶರ್ ಯಶಸ್ವಿಯಾದರು. ಅಲ್ಲಿಗೆ ಪಾಕಿಸ್ತಾನ ತಂಡ ಮತ್ತೆ ಒತ್ತಡದಲ್ಲಿ ಸಿಲುಕಿತು. ಇದಾಗಿ ೧
ರನ್ ಆಗುವಷ್ಟರಲ್ಲಿ ರ್ಧಶತಕ ಗಳಿಸಿದ ಫಖರ್ ಝಮಾನ್ ಅವರನ್ನು ಸಿಮ್ರನ್ ಜಿತ್ ಅವರು ಕೌಶಿಕ್ ಗೆ ಕ್ಯಾಚ್ ಕೊಡಿಸಿದರು. ನಂತರ ಬಂದ ಹಸನ್ ನವಾಝ್ (೩ ರನ್) ಕುಶ್ಚಿಲ್ ಶಾ(೪ ರನ್) ಮೊಹಮ್ಮದ್ ನವಾಝ (೪ ರನ್) ಯಾರೂ ಪಾಕಿಸ್ತಾನದ ಕುಸಿತವನ್ನು ತಡೆಯಲಾಗಲಿಲ್ಲ.
ಈ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ (೧೪ ಎಸೆತದಲ್ಲಿ ೧೮), ಶಾಹಿನ್ ಶಾ ಅಫ್ರಿದಿ (೧೪ ಎಸೆತದಲ್ಲಿ ೨೯) ತಂಡವನ್ನು ಗೌರವಯುತ ಮೊತ್ತ ತಲುಪಿಸುವಲ್ಲಿ ಶ್ರಮಿಸಿದರು. ಭಾರತದ ವಿರುದ್ದ ನಡೆದ ಪಂದ್ಯದಲ್ಲಿ ವೀರಾವೇಶದ ಬ್ಯಾಟಿಂಗ್ ಮಾಡಿದ್ದ ಶಾಹಿನ್ ಶಾ ಅಫ್ರಿದಿ ಈ ಪಂದ್ಯದಲ್ಲೂ ತನ್ನ ತೋಳಲ ಪ್ರರ್ಶಿಸಿದರು. ಅವರ ಇನ್ನಿಂಗ್ಸ್ ನಲ್ಲಿ ೩ ಬೌಂಡರಿ ಮತ್ತು ೨ ಸಿಕ್ಸರ್ ಗಳಿದ್ದವು.