This is the title of the web page
This is the title of the web page

ಶಿಡ್ಲಘಟ್ಟದಲ್ಲಿ `ಶಕ್ತಿ’ ಯೋಜನೆಗೆ ಶಾಸಕರಿಂದ ಚಾಲನೆ

ಶಿಡ್ಲಘಟ್ಟ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಶಾಸಕರು ನಿನ್ನೆ 12:30ಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಮುನ್ನಾ ದಿನ ನಗರದ ಬಸ್ ನಿಲ್ದಾಣದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನಂದಕುಮಾರ್ ಹಾಗೂ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ಪಡೆದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರು.

ಸರ್ಕಾರದ ಮಹತ್ವದ ಈ ಕಾರ್ಯಕ್ರಮವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ನಿಲ್ದಾಣದ ಆವರಣದಲ್ಲಿ ವ್ಯವಸ್ಥಿತವಾಗಿ ಸಂಘಟಿಸಿದ್ದರು. ಮಧ್ಯಾಹ್ನ 12:30ಕ್ಕೆ ಸರ್ಕಾರಿ ಬಸ್ ಶೃಂಗಾರಗೊಂಡು ಡಿಪೋದಿಂದ ಬಂದಿತು. ಶಾಸಕರು ಮತ್ತು ಅವರ ಬೆಂಬಲಿಗರು ಸೇರಿದಂತೆ ಪತ್ರಕರ್ತರು ಹಾಗೂ ಮಹಿಳೆಯರು ವಾಹನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಅದೇ ವಾಹನ ಹೊರಟ ಐದು ನಿಮಿಷದಲ್ಲಿ ನಿಲ್ದಾಣಕ್ಕೆ ವಾಪಸ್ ಬಂದಿತು. ಕಾರ್ಯಕ್ರಮ ಚಾಲನೆ ರೂಪಕವಾಗಿ ನಗರದಿಂದ ಹೊರಟು ಬೈಪಾಸ್ ರಸ್ತೆಯಲ್ಲಿ ವಾಪಸ್ ಬಂದಿತು.ನಂತರ ಶಾಸಕರು ಸಂಚಾರಿ ನಿಯಂತ್ರಕರ ಕಚೇರಿಗೆ ತೆರಳಿ ಸಾರ್ವಜನಿಕರಿಂದ ಅಹವಾಲು ಕೇಳಿಸಿಕೊಂಡರು. ಹಿರಿಯ ನಿವೃತ್ತ ಪತ್ರಕರ್ತರಾದ ಎಸ್.ವಿ. ಅಯ್ಯರ್ ಅವರು ಬೆಂಗಳೂರಿನಿಂದ ಬರುವ ಬಸ್ಸುಗಳು ಮತ್ತು ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ಬಸ್ಸುಗಳು ವರ ವಲಯದಲ್ಲಿ ನಿಲುಗಡೆ ಕೊಟ್ಟು ಪ್ರಯಾಣಿಕರಿಗೆ ಸ್ಪಂದಿಸಬೇಕು.

ಬಹಳಷ್ಟು ವಾಹನಗಳು ನಿಲ್ಲಿಸುವುದಿಲ್ಲ. ಎಂದು ಶಾಸಕರಲ್ಲಿ ಮನವಿ ಮಾಡಿದರು. ಗ್ರಾಮಾಂತರ ಪ್ರದೇಶಗಳಿಗೆ ಸರ್ಕಾರಿ ಬಸ್ಸುಗಳು ಸಮರ್ಪಕವಾಗಿ ಸಂಚಾರ ಮಾಡುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಶಾಸಕರಿಗೆ ಅಹವಾಲು ನೀಡಿದರು.
ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಶ್ರೀಮತಿ ಸುಮಿತ್ರ, ಮಾಜಿ ನಗರಸಭೆ ಸದಸ್ಯರಾದ ಚಿನ್ನಿ, ಮಾಜಿ ಉಪಾಧ್ಯಕ್ಷರಾದ ಚಿಕ್ಕಮುನಿಯಪ್ಪ, ನಗರಸಭೆ ಆಯುಕ್ತ ಶ್ರೀಕಾಂತ್ ಇ.ಓ.ಮುನಿರಾಜು, ತಹಸೀಲ್ದಾರ್ ಎಂ ಸ್ವಾಮಿ, ಜೆಡಿಎಸ್ ಮುಖಂಡರಾದ ತಾಲೂರು ರಘು, ಜೆ ವಿ ಸದಾಶಿವ, ಮುಂತಾದವರು ಶಾಸಕರೊಂದಿಗೆ ಇದ್ದರು.