ಹೊಸದಿಲ್ಲಿ: ಉದ್ದೀಪನ ಸೇವನೆ ಪ್ರಕರಣದಲ್ಲಿ ಕಳೆದ ವರ್ಷ ನಾಡಾದಿಂದ ನಿಷೇಧಕ್ಕೊಳಗಾಗಿದ್ದ ಶಾಲು ಚೌಧರಿ ದೋಷಮುಕ್ತರಾಗಿದ್ದಾರೆ. 800 ಮೀ. ಓಟದಲ್ಲಿ ರಾಷ್ಟ್ರೀಯ ಪದಕ ಗೆದ್ದಿರುವ ಶಾಲು ಅವರನ್ನು, ಕಳೆದ ವರ್ಷ ನಿಷೇಧಿಸಲಾಗಿತ್ತು.
ಅವರು ಶಕ್ತಿ ಪ್ರಚೋದಕ ಉದ್ದೀಪನ, ಹಾರ್ಮೋನ್ಗಳನ್ನು ಉದ್ದೀಪಿಸುವ ಇನ್ನೊಂದು ದ್ರವ್ಯವನ್ನು ಸ್ವೀಕರಿಸಿದ್ದರು ಎಂದು ಕಳೆದ ವರ್ಷ ನಾಡಾ ಶಿಸ್ತುಸಮಿತಿ ಹೇಳಿತ್ತು. ಅವರಿಗೆ 4 ವರ್ಷ ನಿಷೇಧ ಹಾಕಲಾಗಿತ್ತು. ಇದರ ವಿರುದ್ಧ ಶಾಲು ಮೇಲ್ಮನವಿ ಸಲ್ಲಿಸಿದ್ದರು.
ಅಲ್ಲಿ ತಮ್ಮ ಮೂತ್ರದ ಮಾದರಿಯ ಡಿಎನ್ಎ ಪರೀಕ್ಷೆ ನಡೆಸುವಂತೆ ಅವರು ಕೋರಿದ್ದರು. ಲಂಡನ್ ಕಿಂಗ್ಸ್ ಕಾಲೇಜ್ನಲ್ಲಿ ಈ ಪರೀಕ್ಷೆಯನ್ನು ಮಾಡಲಾಗಿತ್ತು. ಇದರಲ್ಲಿ ಅವರ ಮೂತ್ರದ ಮಾದರಿಯನ್ನೇ ತಿರುಚಿರುವ ಅಥವಾ ಅದಕ್ಕೆ ಉದ್ದೀಪನವನ್ನು ಸೇರಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.