ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪರ ಮಿಂಚುತ್ತಿರುವ ವೇಗಿ ಮೊಹಮ್ಮದ್ ಶಮಿ ಬಗ್ಗೆ ಮಾಜಿ ಪತ್ನಿ ಹಸೀನ್ ಜಹಾನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಶಮಿ ಮತ್ತು ಹಸೀನ್ ಬೇರೆಯಾಗಿ ಕೆಲವು ಸಮಯವೇ ಕಳೆದಿದೆ. ಇಬ್ಬರಿಗೂ ಓರ್ವ ಪುತ್ರಿಯೂ ಇದ್ದಾಳೆ.
ಆದರೆ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್, ಅನೈತಿಕ ಸಂಬಂಧ, ಗೃಹಹಿಂಸೆ ಇತ್ಯಾದಿ ಆರೋಪ ಮಾಡಿ ಹಸೀನಾ ದೂರವಾಗಿದ್ದರು.
ಇದೀಗ ಶಮಿ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಂತೆ ಹಸೀನ್ ತನ್ನ ಗಂಡನ ಬಗ್ಗೆ ಮಾಧ?ಯಮಗಳ ಮುಂದೆ ಮಾತನಾಡಲು ಶುರು ಮಾಡಿದ್ದಾರೆ.
‘ಶಮಿ ಹೇಗೆ ಒಳ್ಳೆಯ ಆಟಗಾರನಾಗಿದ್ದಾರೋ, ಹಾಗೆಯೇ ಒಳ್ಳೆಯ ಗಂಡ, ತಂದೆಯಾಗಬೇಕಿತ್ತು. ಆತ ಒಳ್ಳೆಯ ವ್ಯಕ್ತಿಯಾಗಿದ್ದರೆ ನನ್ನ ಗಂಡ, ಮಕ್ಕಳು ಎಂದು ಖುಷಿಯಾಗಿ ಸಂಸಾರ ಮಾಡಿಕೊಂಡಿರುತ್ತಿದ್ದೆ. ಆತ ಒಳ್ಳೆಯ ಆಟಗಾರನಾಗದೇ ಹೋಗಿದ್ದರೂ ಒಳ್ಳೆಯ ವ್ಯಕ್ತಿಯಾಗಿದ್ದರೆ ಸಾಕಾಗಿತ್ತು’ ಹಸೀನ್ ಹೇಳಿದ್ದಾರೆ.
ಇದಕ್ಕೆ ಮೊದಲು ಹಸೀನ್, ಶಮಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎಂದಿದ್ದರು. ಇದೀಗ ಮತ್ತೆ ಸೆಮಿಫೈನಲ್ ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಂತೇ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.