ಕುಣಿಗಲ್: ರಾಜಕೀಯವಾಗಿ ತುಕ್ಕುಹಿಡಿದಿರುವ ಹರಕಲು ಬಾಯಿ ಈಶ್ವರಪ್ಪ ಜನಪ್ರಿಯ ಸಂಸದರಾದ ಡಿಕೆ ಸುರೇಶ್ ರವರಬಗ್ಗೆ ಗುಂಡಿಕ್ಕಬೇಕೆಂಬ ಹೇಳಿಕೆಗೆ ಕ್ಷಮೆಕೇಳಬೇಕೆಂದು ಕುಣಿಗಲ್ ತಾಲ್ಲೂಕು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಶಂಕರ್ ಆಗ್ರಹಿಸಿದ್ದಾರೆ. ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಈಶ್ವರಪ್ಪ ಬಾಯಿಗೆ ಬಂದಂತೆ ಬೊಗಳುವ ಹುಚ್ಚುನಾಯಿಯಂತಾಗಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಒಕ್ಕೂಟ ರಾಷ್ಟ್ರದಲ್ಲಿನ ಸಂವಿಧಾನ ಬದ್ದ ನೀತಿನಿಯಮಗಳನ್ನು ಗಾಳಿಗೆತೂರಿ ಅನುದಾನನೀಡುವಲ್ಲಿ ಧಕ್ಷಿಣ ಭಾರತದ ರಾಜ್ಯಗಳ ಬಗೆಗಿನ ಮಲತಾಯಿ ದೋರಣೆ ಬಗ್ಗೆ ಡಿಕೆ ಸುರೇಶ್ ರವರು ಮಾತಾಡಿರುವ ಹೇಳಿಕೆಯನ್ನು ತಿರುಚಿ ಅವರ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯ.
ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಬರಬೇಕಾಗಿರುವ ಅನುದಾಗಳಬಗ್ಗೆ. ಮಾತಾಡುವ ಧ್ವನಿಕಳೆದುಕೊಂಡಿರವ ಬಿಜೆಪಿ ಸಂಸದರ ಹಾಗೂ ಮುಖಂಡರುಗಳಿಗೆ ಕರ್ನಾಟಕದ ಜನತೆ ಎಂದೂ ಕ್ಷಮಿಸುವುದಿಲ್ಲ ಮುಂಬರುವ ಲೋಕಸಭಾ ಚುನಾವಣೆಯಲ್ಲಿಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಾತಿನ ಮೇಲೆ ನಿಗಾಕಳೆದುಕೊಂಡಿರುವ ಈಶ್ವರಪ್ಪನನ್ನು ಭಾರತೀಯ ಜನತಾಪಕ್ಷ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಅಥವಾ ಕ್ಷಮೆ ಯಾಚಿಸುವಂತೆಮಾಡಬೇಕು ಇಲ್ಲದೆ ಹೋದರೆ ಕುಣಿಗಲ್ ಕ್ಷೇತ್ರದ ಜನಪ್ರಿಯ ಶಾಸಕರಾದ ಹೆಚ್ ಡಿ ರಂಗನಾಥ್ ರವರೊಂದಿಗೆ ಚರ್ಚಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಂದು ಪತ್ರಿಕಾ ಹೇಳಿಕೆ ನೀಡಿ ಶಂಕರ್ ಎಚ್ಚರಿಕೆ ನೀಡಿದ್ದಾರೆ.