ಬೇಲೂರು: ಶ್ರೀ ಶಾರದಾ ಪೀಠಂ ಶಂಕರಮಠ ಬೇಲೂರು ಮತ್ತು ದೇಶಭಕ್ತರ ಬಳಗ ಬೇಲೂರು ಸಂಯುಕ್ತಾಶ್ರಯದಲ್ಲಿ ನಡೆದ ಭಜಗೋವಿಂದ ಸ್ಪರ್ಧಾ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ದೇಶಭಕ್ತರ ಬಳಗದ ತಾಲೂಕು ಅಧ್ಯಕ್ಷರಾದ ಡಾಕ್ಟರ್ ಸಂತೋಷ್ ಕುಮಾರ್ ನಡೆಸಿಕೊಟ್ಟರು.
ನಂತರ ಮಾತನಾಡಿದ ಅವರು. ಸನಾತನ ಧರ್ಮ ಸಂಸ್ಕೃತಿ ಉಳಿವಿಗಾಗಿ ಆದಿಶಂಕರರ ಕೊಡುಗೆ ಅಪಾರ ಎಂದು ನುಡಿದರು.. ಜಗತ್ತಿನ 36 ಸಂಸ್ಕೃತಿಗಳಲ್ಲಿ. 35 ಸಂಸ್ಕೃತಿಗಳು ನಶೆಸಿ ಹೋಗಿರುವಾಗಲು ಭಾರತೀಯ ಸನಾತನ ಸಂಸ್ಕೃತಿ ಮಾತ್ರ ಉಳಿಯಿತು.. ಇದನ್ನು ಉಳಿಸುವಲ್ಲಿ ಶಂಕರಾಚಾರ್ಯರಂತ ಧರ್ಮದೃಷ್ಟರ ಕೊಡುಗೆ ಅಪಾರ. ಇವರು ದೇಶಾದ್ಯಂತ ಸಂಚರಿಸಿ.
ನಾಲಕ್ಕು ಆಮ್ನಾಯ ಮಠಗಳನ್ನು ಸ್ಥಾಪಿಸಿ ತಮ್ಮದೇ ಅದ್ವೈತ ಸಿದ್ದಾಂತವನ್ನು ಪ್ರತಿಷ್ಠಾಪಿಸಿ ಸನಾತನ ಸಂಸ್ಕೃತಿಯನ್ನು ಉಳಿಸಿದರು.ಅಲ್ಲದೆ ನಮ್ಮ ದೇಶಭಕ್ತ ಬಳಗದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಮುಂದೆಯೂ ಕೂಡ ಇದನ್ನು ಮುಂದುವರೆಸಿಕೊಂಡುಹೋಗುವುದಾಗಿ ತಿಳಿಸಿದರು.
ನಂತರ ಶಂಕರ ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ ನಮ್ಮ ಸಂಸ್ಕೃತಿ ಧರ್ಮ ರಕ್ಷಣೆಗೆ ಶೃಂಗೇರಿ ಶ್ರೀಗಳ ಕೊಡುಗೆ ಅಪಾರ ಮತ್ತು ನಾವು ಈ ಕಾರ್ಯಕ್ರಮವನ್ನು ಮಾಡು ವುದಕ್ಕೆ ಶೃಂಗೇರಿ ಶ್ರೀಗಳು ಮನಪೂರ್ವಕವಾಗಿ ಆಶೀರ್ವಾದ ಮಾಡಿರುವುದೇ ಪ್ರೇರಣೆಯಾಗಿರುತ್ತದೆ.
ಇನ್ನು ಮುಂದೆ ನಿರಂತರವಾಗಿ ಭಗವದ್ಗೀತೆ ರಾಮಾಯಣ ಮಹಾಭಾರತ ಕ್ವಿಜ್ ಮುಂತಾದ ಕಾರ್ಯಕ್ರಮಗಳನ್ನು ಮಠದಲ್ಲಿ ಮಾಡುವ ಯೋಜನೆ ಇದೆ ಎಂದು ತಿಳಿಸಿದರುಇದೇ ವೇಳೆ 80 ಜನ ವಿದ್ಯಾರ್ಥಿಗಳಿಂದ ಭಜಗೋವಿಂದ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮೆಡಿಕಲ್ ಮಹೇಶ್, ಹಯವದನರಾವ್, ಪ್ರಕಾಶ್, ನವರತ್ನ ಎಸ್ ವಟಿ,ಹರೀಶ್ ಸೇರಿದಂತೆ ಇತರರು ಹಾಜರಿದ್ದರು.