ಧಾರವಾಡ: ಧಾರವಾಡ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳು ಹುಬ್ಬಳ್ಳಿ ಶಹರದ ಬಿಡಿಕೆ ಕ್ರಿಕೆಟ್ ಮೈದಾನದಲ್ಲಿ ನಡೆದವು.ಇದರಲ್ಲಿ ಹುಬ್ಬಳ್ಳಿ ಶಹರದ ಎಸ್ ಬಿ ಐ ಪ್ರೌಢಶಾಲೆಯ ತಂಡವನ್ನು ಧಾರವಾಡ ಶಹರದ ಶಾಂತಿ ಸದನ ಪ್ರೌಢಶಾಲೆಯ ಕ್ರಿಕೆಟ್ ತಂಡವು ೯ ವಿಕೆಟ್ ಗಳ ಅಂತರದಿAದ ವಿಜಯಶಾಲಿಯಾಗಿ ವಿಜಯಪುರದಲ್ಲಿ ನಡೆಯುವ ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಗಳಿಗೆ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲು ಅರ್ಹತೆಯನ್ನು ಪಡೆಯಿತು ಈ ಪಂದ್ಯದಲ್ಲಿ ಧಾರವಾಡ ಶಹರದ ಕ್ರಿಕೆಟ್ ತಂಡದ ತಂಡವು ನಾಯಕನಾದ ಸುಶೀಲ್ ಸಿದ್ದಟಗಿ ಮಠ ಯಶೋಮ್ ನಾಯಕ್ ನಮನ್ ಅಭಿಲಾಶ್ ಇವರ ಉತ್ತಮ ಪ್ರದರ್ಶನದಿಂದ ಧಾರವಾಡ ಶಹರ ತಂಡವು ವಿಜಯಶಾಲಿ ಯಾಯಿತು ಈ ತಂಡವನ್ನು ಶಾಂತಿ ಸದನ ಪ್ರೌಢಶಾಲೆಯ ಆಡಳಿತ ಮಂಡಳಿ ಮತ್ತು ವ್ಯವಸ್ತಾಪಕರಾದ ಸಿಸ್ಟರ್ ಫಾತಿಮಾ ಹಾಗೂ ಮುಖ್ಯೋಪಾದ್ಯಯನಿಯಾದ ಸಿಸ್ಟರ್ ಫಿಲೋಮಿನಾ ರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಸಿಂದಗಿ ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿಗಳಾದ ರಾಮಣ್ಣ ಮಾಳಿ ಮತ್ತು ಶಾಲೆಯ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ ಚಿತ್ರದಲ್ಲಿ.
ಧಾರವಾಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ನಾರಾಯಣ್ ಹೆಬ್ಬಾರ್ ದೈಹಿಕ ಶಿಕ್ಷಣ ಶಿಕ್ಷಕರಾದ ಬಸವರಾಜ್ ಪಟ್ಟಣದವರ್ ಎಸ್ ಬಿ ಹಿರೇಮಠ ಮಡಿವಾಳೇಶ್ ಶರಣು ಗುತ್ತಲ್ ಇಮ್ಯಾನ್ಉಲ್ಲ ಚೆಲ್ಲಾ ನಾಗರಾಜ್ ಸಂತೋಷ್ ಲೂಯಿಸ್ ಇದ್ದಾರೆ.