ವಿಶ್ವದಲ್ಲೇ ಮೊದಲು ಎನ್ನುವಂತೆ ರಿಯಲ್ ಅಂದ ದಂಪತಿಗಳು ರೀಲ್ದಲ್ಲಿ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಶರತ್ ಮತ್ತು ಶರಧಿ ಕಿರುಚಿತ್ರದ ವಿಶೇಷ ಪ್ರದರ್ಶನವನ್ನು ಮಾಧ್ಯಮದವರಿಗೆ ಏರ್ಪಡಿಸಲಾಗಿತ್ತು. `ಏಪ್ರಿಲ್ನ ಹಿಮಬಿಂದು’ ಚಿತ್ರದ ನಿರ್ದೇಶಕ ಎಂ.ಜಗದೀಶ್ ಕತೆ ಬರೆದು ಆಕ್ಷನ್ ಕಟ್ ಹೇಳುವುದರ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಟಾಕ್ಗುರು ಕ್ರಿಯೇಶನ್ಸ್ ಅಡಿಯಲ್ಲಿ ಗಣೇಶ್.ಬಿ.ಎಂ. ಬಂಡವಾಳ ಹೂಡಿದ್ದಾರೆ. ಅಂತರರಾಷ್ಟಿçÃಯ ಪ್ರಶಸ್ತಿ ಮತ್ತು ಲೇಟ್ ಬ್ರಿಟನ್ ರಾಣಿಯಿಂದ ಗೌರವ ಸ್ವೀಕರಿಸಿರುವ ನಾಯಕಿ ಅಶ್ವನಿ ಅಂಗಡಿ ಹೇಳುವಂತೆ ಇದೊಂತರ ಹೊಸ ಪ್ರಯತ್ನ. ನಾವು ಎಲ್ಲರಂತೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದೇವೆ.
ದಿವ್ಯಾಂಗದ ಪೋಷಕರು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಕ್ಕಳನ್ನು ಚೆನ್ನಾಗಿ ಬೆಳಸಿ ಎಂದು ಧೈರ್ಯ ತುಂಬಿದರು. ಸರ್ಕಾರಿ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿರುವ ದಾವಣಗೆರೆ ಮೂಲದ ನಾಯಕನಾಗಿ ಅಭಿನಯಿಸಿರುವ ವೀರೇಶ್.ಎಂ ಶೂಟಿಂಗ್ ಅನುಭವಗಳನ್ನು ಹಂಚಿಕೊAಡರು. ಹಿರಿಯ ನಟ ದತ್ತಣ್ಣ ಮಾತನಾಡಿ, ಅನುಬಂಧದ ಮೇಲೆ ಮದುವೆ ಆಗಬೇಕು ಹೊರತು ಅನುಕಂಪದ ಮೇಲೆ ಮದುವೆ ಆಗಬಾರದು. ದುಖ: ಪಡೋದಕ್ಕೆ ಸಾಕಷ್ಟು ಕಾರಣ ಇರುತ್ತವೆ. ಅದೇ ಸುಖವಾಗಿ ಇರೋದಕ್ಕೆ ಕಾರಣಗಳು ಬೇಕಾಗಿಲ್ಲ. ಸಂತೋಷವಾಗಿ ಇದ್ದೇವೆ ಅಂತ ಮನಸ್ಥಿತಿ ಇದ್ದರೆ ಸಾಕು. ಇಂತಹ ಹಲವು ಮನಸ್ಸು ಕದಡುವ ಡೈಲಾಗ್ಗಳು ಮತ್ತು ಇವರ ಮಗಳು ಪುಟಾಣಿ ವೇದಿಕಾ ಕೂಡ ಅಂದಳಾಗಿದ್ದರಿAದ ನೆರೆದಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಸಂಗೀತ ಸತೀಶ್ ಪದ್ಮನಾಬನ್,
ಛಾಯಾಗ್ರಹಣ ವಿನಯ್ ಹೊಸಗೌಡರ್, ಕೋ ಡೈರಕ್ಟರ್ ಚೇತನ್ ತ್ರಿವೇಣ್, ಸಂಕಲನ ಸುಪ್ರೀತ್.ಬಿ.ಕೆ ಅವರದಾಗಿದೆ.