ಲೋಕಸಭಾ ಚುನಾವಣೆ ಸಮೀಕ್ಷೆ ಮತದಾರರ ಮನದಾಳದ ಮಾತನ್ನ ಮತದಾರರಿಗೆ ತಿಳಿಸಿದ ಇಂಡಿಯ ಸರ್ವೆ ಇಂಡಿಯ 18ನೇ ಲೋಕಸಭಾ ಚುನಾವಣೆಯಲ್ಲಿ ಏಪ್ರಿಲ್ ನಿಂದ ಆರಂಭವಾಗಿದೆ ಜೂನ್ 1 ಮುಕ್ತಾಯವಾಯಿತು.ಶೈನಿಂಗ್ ಇಂಡಿಯ ಸರ್ವೆ ಇಂಡಿಯ ಸಂಸ್ಥೆಯವರು ಲೋಕಸಭಾ ಚುನಾವಣೆ ಎರಡು ತಿಂಗಳ ಮುಂಚೆ ಪ್ರತಿ ರಾಜ್ಯಗಳಲ್ಲಿ ಲಕ್ಷಾಂತರ ಜನರ ಸರ್ವೆ ಮಾಡಿದರು.
ಮತದಾರರು ಯಾವ ಪಕ್ಷ ಮತ ಹಾಕುತ್ತಿರ ಮತ್ತು ಯಾಕೆ ಮತ ಕೊಡುತ್ತಿದ್ದಿರ ಎಂಬ ಹಲವಾರು ಪ್ರಶ್ನೆಗಳನ್ನು ಮತದಾರರ ಬಳಿ ನಿಖರವಾಗಿ ಸಂಗ್ರಹ ಮಾಡಲಾಯಿತು.18ನೇ ಲೋಕಸಭಾ ಚುನಾವಣೆಯಲ್ಲಿ ಶೈನಿಂಗ್ ಇಂಡಿಯ ಸರ್ವೆ ನಡೆಸಿದ ಸಂದರ್ಭದಲ್ಲಿ ಮತದಾರರು ಕೊಟ್ಟ ಮಾಹಿತಿಯನ್ನ ಈ ಮುಂಚೆ ಪ್ರಕಟನೆ ಮಾಡಲಾಗಿತ್ತು.
ಬಿಜೆಪಿ ಎನ್.ಡಿ.ಎ. 253ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮತ್ತು ಇಂಡಿಯ ಮೈತ್ರಿಕೂಟ 186ಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ವರದಿ ಪ್ರಕಟನೆ ಮಾಡಲಾಯಿತು.ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ ಬಿಜೆಪಿ ಎನ್.ಡಿ.ಎ. ಮೈತ್ರಿಕೂಟ 295 ಮತ್ತು ಕಾಂಗ್ರೆಸ್ ಇಂಡಿಯ ಮೈತ್ರಿಕೂಟ 229ಸ್ಥಾನಗಳು ಗಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ,ಜೆಡಿಎಸ್ ಮೈತ್ರಿಕೂಟ 16ಸ್ಥಾನ ಗೆಲ್ಲಲಿದೆ ಕಾಂಗ್ರೆಸ್ ಪಕ್ಷ 9 ರಿಂದ 12 ಗೆಲ್ಲಲಿದೆ ಎಂದು ಶೈಲಿಂಗ್ ಸರ್ವೆ ಇಂಡಿಯ ಸಮೀಕ್ಷೆ ವರದಿ ಪ್ರಕಟನೆ ಮಾಡಿತ್ತು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟ 19ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷ 9ಸ್ಥಾನ ಗಳಿಸಿದೆ. ಶೈನಿಂಗ್ ಇಂಡಿಯ ಸರ್ವೆ ಕಳೆದ ಲೋಕಸಭಾ ಮತ್ತು ಹಲವಾರು ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆಗಳು ನಿಖರವಾಗಿ ನೀಡಿದೆ ಮತ್ತು ಈ ಬಾರಿಯು ಸಹ ಲೋಕಸಭಾ ಚುನಾವಣೆ ಸಮೀಕ್ಷೆಯನ್ನು ನಿಖರವಾಗಿ ನೀಡಿರುವುದು ಸಾಧನೆಯಾಗಿದೆ ಎಂದು ಶೈನಿಂಗ್ ಸರ್ವೆ ಇಂಡಿಯದ ಸಂಸ್ಥಾಪಕ ಹೃತಿಕ್ ಶೈನಿಂಗ್ ರವರು ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.