This is the title of the web page
This is the title of the web page

ಶೂಟಿಂಗ್ ವಿಶ್ವಕಪ್: ಭಾರತದ ರಿಧಮ್‍ಗೆ ಕಂಚು

ನವದೆಹಲಿ: ಭಾರತದ ರಿಧಮ್ ಸಂಗ್ವಾನ್ ಅವರು ಐಎಸ್‍ಎಸ್‍ಎಫ್ ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್) ಶೂಟಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಅಜರ್‍ಬೈಜಾನ್‍ನ ಬಾಕುವಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರಿಗೆ ಪದಕ ಒಲಿದಿದೆ. ಫೈನಲ್‍ನಲ್ಲಿ ರಿಧಮ್ 219.1 ಪಾಯಿಂಟ್ಸ್ ಗಳಿಸಿದರು. ಗ್ರೀಸ್‍ನ ಅನ್ನಾ ಕೊರಾಕಾಕಿ (241.3 ಪಾಯಿಂಟ್ಸ್) ಚಿನ್ನ ಮತ್ತು ಉಕ್ರೇನ್‍ನ ಒಲೆನಾ ಕೊಸ್ಟೆವಿಚ್ (240.6) ಬೆಳ್ಳಿ ಜಯಿಸಿದರು.

ಪುರುಷರ ಮತ್ತು ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗಗಳಲ್ಲಿ ಫೈನಲ್ಸ್ ತಲುಪಿದ್ದ ಸರಭ್ಜೋತ್ ಸಿಂಗ್ ಮತ್ತು ಇಶಾ ಸಿಂಗ್ ಪದಕ ತಪ್ಪಿಸಿಕೊಂಡರು. ಇಶಾ ಆರನೇ ಸ್ಥಾನ ಗಳಿಸಿದರೆ, ಇದೇ ವಿಭಾಗದಲ್ಲಿದ್ದ ದಿವ್ಯಾ ಟಿ.ಎಸ್. 17ನೇ ಸ್ಥಾನ ಗಳಿಸಿದರು.