ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಓಂ ಶ್ರೀ ಸಾಯಿರಾಂ ಸಾಂಸ್ಕøತಿಕ ಕಲಾ ವೇದಿಕೆಯ 10ನೇ ವರ್ಷದ ವಾರ್ಷಿಕೋತ್ಸವವನ್ನು ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ||ಜಿ.ವೈ.ಪದ್ಮಾನಾಗರಾಜ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಓಂ ಶ್ರೀಸಾಯಿರಾಂ ಸಾಂಸ್ಕøತಿಕ ಕಲಾ ವೇದಿಕೆ ಪ್ರಧಾನ ಕಾರ್ಯದರ್ಶಿ ಮೈಸೂರು ಮಂಜುಳಾ (ಜೂ.ಮಾಲಾಶ್ರೀ)ಅವರ ನೇತೃತ್ವದಲ್ಲಿ ಕುರುಕ್ಷೇತ್ರ-ರಕ್ತರಾತ್ರಿ ಪೌರಾಣಿಕ ನಾಟಕಗಳಲ್ಲಿ ಕಲಾವಿದರ ಅಭಿನ ಯ ಉತ್ತಮವಾಗಿತ್ತು. ಮಂಜುಳಾ ಅಭಿನಯ ಎಲ್ಲರ ಮನಸೆಳೆಯಿತು. ಇಂಪಾದ ಸಂಗೀತ-ತಬಲನಾದ ಪ್ರೇಕ್ಷಕರ ಮೆಚ್ಚುಗೆಯಾಗಿತ್ತು.
ಡಾ||ಜಿ.ವೈ.ಪದ್ಮಾನಾಗರಾಜ್ ಹಾಗೂ ಪ್ರೊ.ಸಮತಾ ಬಿ ದೇಶಮಾನೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಸಮಾಜಸೇವಕ ಕನ್ನಡ ನಾಡುನುಡಿ ಭಾಷೆ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಬಸವನಗುಡಿ ತ್ಯಾಗರಾಜುರವರಿಗೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದಂತೆ ಇನ್ನು ಅನೇಕ ಕಲಾವಿದರುಗಳಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಿದರು.ಚಲನಚಿತ್ರ ಹಾಸ್ಯನಟ ಎಂ.ಎನ್.ಸುರೇಶ್, ಕಲಾವಿದರಾದ ಪೂರ್ಣಿಮಾ,ಎಸ್.ಲತಾ, ವಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.