This is the title of the web page
This is the title of the web page

ಶ್ರೇಯಸ್ ಕೆ. ಮಂಜು ಹೊಸ ಸಿನಿಮಾ ಅನೌನ್ಸ್.. `ಪಡ್ಡೆಹುಲಿ'ಗೆ ಪ್ರಿಯಾಂಕಾ ಕುಮಾರ್ ಜೋಡಿ?

ವಿಷ್ಣು ಪ್ರಿಯ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ಮಾಪಕ ಕೆ ಮಂಜು ಸುಪುತ್ರ ಶ್ರೇಯಸ್ ಕೆ ಮಂಜು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಮಾಸ್ ಎಂಟರ್ ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯಾಗಿರುವ ಈ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿ. ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಎಪಿ ಅರ್ಜುನ್ ಹಾಗೂ ವಿರಾಟ್ ಕಾಂಬೋದ ಅದ್ಧೂರಿ ಲವರ್ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಪ್ರಿಯಾಂಕಾಗೆ ಇದು ಮೂರನೇ ಚಿತ್ರ.

ಏಷ್ಯಾನೆಟ್ ಮೂವೀ ಬ್ಯಾನರ್ ನಟಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. ಇದೇ 31ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ ತಿಂಗಳಿಂದ ಶೂಟಿಂಗ್‍ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.