ಗೌರಿಬಿದನೂರು: ಶ್ರೀ ಆದಿಶಕ್ತಿ ಎಜುಕೇಷನ್ ಸೋಶಿಯಲ್ &ಕಲಾ ಟ್ರಸ್ಟ್ ಮತ್ತುಶ್ರೀ ಶುಭ ಗುರು ಟ್ರಸ್ಟ್ ವತಿಯಿಂದ ಶ್ರೀ ಆದಿಶಕ್ತಿ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ -2024 ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜೆ ಸಿ ರಸ್ತೆ ಕನ್ನಡ ಭವನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ.
ಕಾರ್ಯಕ್ರಮದಲ್ಲಿ ಶ್ರೀ ಆದಿಶಕ್ತಿ ಅಧ್ಯಕ್ಷರು ಹಾಗೂ ಹಿರಿಯ ರಂಗಭೂಮಿ ಕಲಾವಿದರಾದ ಸುಮತಿ ಶ್ರೀ ಎಸ್ ನವಲಿ ಹಿರೇಮಠ ಹಾಗೂ ಸಮಾಜ ಸೇವಕರಾದ ತೇಜಾ ಎಸ್ ರೆಡ್ಡಿ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ಒಬಿಸಿ ಅಧ್ಯಕ್ಷ ಆರ್ ಎ ಅಸ್ಕಿಲ್ ಹಾಗೂ ರಾಜ್ಯಾಧ್ಯಕ್ಷ ಮುನಿಕೃಷ್ಣ ಪಾಲ್ ಮತ್ತು ಶುಭ ಗುರು ಟ್ರಸ್ಟ್ ನ ಅಧ್ಯಕ್ಷ ಸುನೀಲ್ ರವರ ನೇತೃತ್ವದಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಮಾದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಟಿ ವಿ ಮಂಜುನಾಥ ರವರಿಗೆ ಶ್ರೀ ಆದಿಶಕ್ತಿ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದರು.ತಾಲ್ಲೂಕಿನ ಜನತೆ ಮತ್ತು ಕುಟುಂಬ ವರ್ಗದವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.