ದೇವನಹಳ್ಳಿ: ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ 2024ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೆ.ಎಂ. ಲಕ್ಷೀಕಾಂತ ರವರು ಮಾತನಾಡಿ ಸಮುದಾಯದ ಬಂಧುಗಳಿಗೆ ಸಹಕಾರಿ ಆಗಲೆಂದು ವಾಲ್ಮೀಕಿ ಮಹರ್ಷಿ ಪತ್ತಿನ ಸಹಕಾರ ಸಂಘದಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಅಲ್ಪಾವಧಿಯ ಸಾಲಗಳನ್ನು ವರ್ಷಕ್ಕೆ ಶೇ.12 ರಂತೆ ಸಾಲವನ್ನು ನೀಡುತ್ತಿದ್ದು.
ಅರ್ಥಿಕವಾಗಿ ಮುಂದೆ ಬರಲು ಜನಾಂಗದ ಬಂದುಗಳು ದಿನಸಿ ಅಂಗಡಿ ತೆರೆಯಲು, ಹಸು ಕರಿದಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಕ್ಕೆ ಸಾಲವನ್ನು ಪಡೆದು ತಮ್ಮ ಅರ್ಥಿಕ ಶಕ್ತಿ ಯನ್ನು ಬಲಪಡಿಸಿಕೊಳ್ಳಬೇಕೆಂದು ತಿಳಿಸಿದರು.ದೇವನಹಳ್ಳಿ ಪಟ್ಟಣದ 16ನೇ ವಾರ್ಡ, ಗಿಡ್ಡಿ ಬಾಗಿಲು ರಸ್ತೆ, ಅಶ್ವಥ್ ಕಟ್ಟೆ ಮುಂಭಾಗದ ಸಂಘದ ಆವರಣದಲ್ಲಿ ಸಂಘದ ನಿರ್ದೇಶಕರಾದ ದೊಡ್ಡಸೊಣ್ಣೆ ಸಿ.ಮುನಿರಾಜುರವರು ಮಾತನಾಡಿ ಸಮುದಾಯದ ಬಂಧುಗಳು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಹಾಗೂ ರಾಜಕೀಯವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಮುಂದೆ ಬಂದಾಗ ಮಾತ್ರಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಸಂಘದಲ್ಲಿ ಷೇರುಗಳನ್ನು ಕಟ್ಟಿ ಸದಸ್ಯತ್ವ ಪಡೆದು ಸಹಕಾರ ಸಂಘದಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು ಪಡೆಯ ಬಹುದು, ಸಂಘಕ್ಕೆ ದಾನಿಗಳು ಹೆಚ್ಚಿನ ಸಹಕಾರವನ್ನು ನೀಡಬೇಕು ಹಾಗೂ ಎಲ್ಲಾ ವರ್ಗದ ಜನರು ಇಲ್ಲಿ ಎಫ್.ಡಿ.ಮಾಡಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದೇವನಹಳ್ಳಿ ಮಹರ್ಷಿ ವಾಲ್ಮೀಕಿ ಸಹಕಾರ ಪತ್ತಿನ ಸಹಕಾರ ಸಂಘದ ಎಲ್ಲಾ ಸದಸ್ಯರಿಗೂ ನೂತನ ವರ್ಷದ ಶುಭಾಶಯ ತಿಳಿಸಿ ಕ್ಯಾಲೆಂಡರನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀನಿವಾಸ್ ಕೆ, ರಾಮು ಬಿ, ಗೋಪಾಲ್. ರಾಧಾಕೃಷ್ಣ ಚನ್ನಕೇಶವ ಡಿ, ಮುನಿಕೃಷ್ಣಪ್ಪ, ಗೋಪಾಲಕೃಷ್ಣ ಮುನಿರತ್ನಮ್ಮ ಸಂಗೀತ, ಮುಖ್ಯಕಾರ್ಯನಿರ್ವಣಾಧಿಕಾರಿ ಡಾ. ನಾಗೇಂದ್ರ ಎಂ. ಹಾಗೂ ಸಮುದಾಯದ ಬಂಧುಗಳು ಹಾಜರಿದ್ದರು.