ತಿ.ನರಸೀಪುರ: ಶಿಕ್ಷಣ, ಸಮಾಜ ಹಾಗು ಸಂಸ್ಕೃತಿಯ ಉನ್ನತೀಕರಣಕ್ಕೆ ಬೇಕಾದಂತಹ ಸೇವಾ ಕಾರ್ಯಗಳನ್ನು ಮಠ ಮಾನ್ಯಗಳು ನೂರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ ಎಂದು ಸುತ್ತೂರು ವೀರ ಸಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೆಂದ್ರ ಮಹಾಸ್ವಾಮಿ ಹೇಳಿದರು.ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಪಟ್ಟದ ಮಠದ ಆವರಣದಲ್ಲಿ ಶ್ರೀ ಚೆನ್ನ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಸುವರ್ಣ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಮಠ ಮಾನ್ಯಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು,ಶಿಕ್ಷಣ, ಸಂಸ್ಕೃತಿ ಹಾಗು ಸಮಾಜದ ಉನ್ನತಿಗೆ ಮಾಡಬಹುದಾಂತಹ ಸೇವಾ ಕಾರ್ಯಗಳನ್ನು,ಅದರಲ್ಲೂ ವಿಶೇಷವಾಗಿ ವೀರಶೈವ ಲಿಂಗಾಯತ ಮಠಗಳು ನೂರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ.ಮೈಸೂರಿನಿಂದ ಬೀದರ್ ತನಕ ಅನೇಕ ಮಠಗಳು ಅವುಗಳ ವ್ಯಾಪ್ತಿಯಲ್ಲಿ ಬಹಳ ದೊಡ್ಡದಾದ ಸೇವಾ ಕಾರ್ಯ ಗಳನ್ನು ಮಾಡುತ್ತಿವೆ.ರಾಷ್ಟ್ರಗಳಾದ ಚಂದ್ರ ಶೇಖರ ಕಂಬಾರರು ಗೋಕಾಕ್ ನ ಸಾವಳಗಿ ಮಠದಲ್ಲಿ ಅನ್ನದಾಸೋಹ ಸೇವೆ ಪಡೆದಂತವರು,ಶಿವರುದ್ರಪ್ಪಸೇರಿದಂತೆ ಅನೇಕರು ಚಿತ್ರದುರ್ಗದಮುರುಘಾಮಠ,ತುಮಕೂರಿನ ಸಿದ್ದಗಂಗಾ ಮಠ ಹಾಗು ಮೈಸೂರಿನ ಸುತ್ತೂರು ಮಠಗಳಲ್ಲಿ ಆಶ್ರಯ ಪಡೆದು ರಾಷ್ಟ್ರ ಕವಿಗಳಾದ ಉದಾಹರಣೆಗಳಿವೆ.ಈ ಮಠಗಳು ಯಾವುದೇ ಜಾತಿ ಮತಗಳ ತಾರತಮ್ಯವಿಲ್ಲದೇ ಸೇವಾಕಾರ್ಯ ನೀಡುತ್ತಿದ್ದು ಇಸ್ಲಾಂ ಧರ್ಮದವರು ಆಶ್ರಯ ಪಡೆಯಲು ಅವಕಾಶ ಮಾಡಿಕೊಟ್ಟಿವೆ.ಇಂತಹ ಮಠಗಳ ನಿಸ್ವಾರ್ಥ ಸೇವೆಯಿಂದಾಗಿ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಉತ್ತಮವಾಗಿದ್ದು ಸಾಕ್ಷರತೆ ಹೆಚ್ಚಾಗಲು ಮಠಗಳು ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.ಪೂಜ್ಯಶ್ರೀ ಚೆನ್ನ ಮಲ್ಲಿಕಾರ್ಜುನ ಸ್ವಾಮಿ ಯವರು ವಿದ್ವತ್ತನ್ನು ಸಂಪಾದನೆ ಮಾಡುವುದರ ಜೊತೆಗೆ ವೀರಶೈವ ಲಿಂಗಾಯಿತ ಧರ್ಮದ ಎಲ್ಲ ತಂತ್ರಜ್ಞಾನ, ತಾತ್ವಿಕ ಅಂಶಗಳ ಆಚರಣೆಯನ್ನು ಭಕ್ತಾಧಿಗಳಿಗೆ ತಿಳಿಸುವಂತಹ ಸಾಮರ್ಥ್ಯ ವನ್ನು ಕೂಡ ಹೊಂದಿದ್ದರು. ಹಿರಿಯ ಶ್ರೀಗಳ ಪುಣ್ಯ ಸಂಸ್ಮರಣೆ ಜೊತೆಗೆ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಾಡ್ರಹಳ್ಳಿ ಮಠದ ಜವಾಬ್ದಾರಿ ವಹಿಸಿಕೊಂಡು 50 ವರ್ಷಗಳಾಗಿವೆ.ಆದರೆ ಅವರ ಪಟ್ಟಾಧಿಕಾರದ 50 ವರ್ಷ ಆಚರಸುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಅವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವವನ್ನು ಗುರುಗಳಸಂಸ್ಮರಣೆ ಜೊತೆಗೆ ಸಮೀಕರಣಗೊಳಿಸುವ ಮೂಲಕ ಗುರುಗಳಿಗೆ ವಿಶೇಷವಾದ ಗೌರವ ಸಲ್ಲಿಸುತ್ತಿದ್ದಾರೆ ಎಂದು ಶಾಂತ ಮಲ್ಲಿಕಾರ್ಜುನ ಸ್ವಾಮಿಯವರ ನಡೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ತುಮಕೂರು ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಡ್ರಹಳ್ಳಿ ಪಟ್ಟದ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ದೇವನೂರು ದಾಸೋಹ ಮಠದ ಮಹಾಂತ ಸ್ವಾಮೀಜಿ,ವಾಟಾಳು ಸೂರ್ಯ ಸಿಂಹಾಸನಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಡಾ. ಶ್ರೀ ಚನ್ನಬಸವ ಸ್ವಾಮೀಜಿ, ಮಹ ದೇಶ್ವರಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನಬಸವ ದೇಶಕೇಂದ್ರ ಸ್ವಾಮೀಜಿ, ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಶಿವಲಿಂಗೇಂದ್ರ ಸ್ವಾಮೀಜಿ, ಪರಶಿವಮೂರ್ತಿ ಸ್ವಾಮೀಜಿ, ಡಾಕ್ಟರ್ ಶರತ್ ಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಭಾರತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್ವಿ ಹಿನ ಕಲ್ ಬಸವರಾಜು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸಿಎಂ ಪ್ರಕಾಶ್, ಗ್ರಾಮ ವಿದ್ಯೋದಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ, ಕೆಪಿ ಮಹದೇವಸ್ವಾಮಿ, ದೇವನೂರು ವಿಶ್ರಾಂತ ಪ್ರಾಧ್ಯಾಪಕ ಡಿ.ಎಸ್. ಸದಾಶಿವಮೂರ್ತಿ ಮಾತನಾಡಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್,ಅನಾಥ ಶವಗಳ ಮುಕ್ತಿದಾತ ಡಾ.ಎಂ.ಮಾದೇಶ್, ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ ರವರನ್ನು ಸನ್ಮಾನಿಸಲಾಯಿತು.ಸರ್ಪಭೂಷಣ ಸ್ವಾಮೀಜಿ, ನಂಜುಂಡಸ್ವಾಮಿಜಿ, ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ, ಷಡಕ್ಷರ ಶಿವಾಚಾರ್ಯ ಸ್ವಾಮೀಜಿ, ಶ್ರೀಕಂಠ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಿವಪ್ರಭು ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ ಸೇರಿದಂತೆ ನಿವೃತ್ತ ಮುಖ್ಯೋಪಾಧ್ಯಾಯ ಪುಟ್ಟಬುದ್ದಿ,ಮೂಗೂರು ಕುಮಾರಸ್ವಾಮಿ,ನಿಲಸೋಗೆ ನಂಜುAಡಸ್ವಾಮಿ ಸೇರಿದಂತೆ ಮತ್ತಿತರರಿದ್ದರು.



