ಚಿತ್ರದುರ್ಗ: ಚಿತ್ರದುರ್ಗ ಅರಸರ ರಾಜದೇವತೆ ಶ್ರೀ ಉಚ್ಚಂಗಿ ಯಲ್ಲಮ್ಮ ಅಮ್ಮನವರ ಜಾತ್ರಾ ಮಹೋತ್ಸ ವದ ಅಂಗವಾಗಿ ಅಮ್ಮನವರ ರಥೋತ್ಸವವನ್ನು ನಗರ ದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಅದ್ದೂರಿ ವಿಜೃಂಭಣೆಯಿಂದ ನೆಡೆಯಿತು.
ನಗರದ ಕೋಟೆ ರಸ್ತೆಯಲ್ಲಿ ಇರುವ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಿಗೆ ಅಭೀಷೇಕ ಹಾಗೂ ಮಹಾ ಮಂಗ ಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗ ಳೊಂದಿಗೆ ದೇವಿಗೆ ಪೂಜಾ ಕೈಂಕರ್ಯಗಳನ್ನು ನೇರ ವೇರಿಸಿದ ನಂತರ,ಸಾವಿರಾರು ಭಕ್ತರು ರಥೋತ್ಸವವ ನ್ನು ನಗರದ ವಿವಿಧ ರಾಜಬೀದಿಗಳಲ್ಲಿ ಸಡಗರ ಸಂಭ್ರ ಮದಿಂದ ನಡೆಸಲಾಯಿತು.
ಮೇ 25ರ ಶನಿವಾರ ಮಧ್ಯಾಹ್ನ 12ಕ್ಕೆ ದೇವಿಗೆ ವಿಶೇಷ ಭಂಡಾರ ಪೂಜೆ,ಸಂಜೆ 6ಕ್ಕೆ ಅಮ್ಮನವರ ಸಿಡಿ ಉತ್ಸವ ನಡೆಯಲಿದೆ.ದೇವಿಗೆ ಅಭೀಷೇಕ ರಾತ್ರಿ 9ಕ್ಕೆ ಜೋಗಪ್ಪ ಮತ್ತು ಜೋಗಮ್ಮನವರಿಂದ ಓಕುಳಿ ಕಾರ್ಯಕ್ರಮ ನಡೆಯಲಿದೆ.ಮೇ. 28 ರಂದು ಬೆಳಿಗ್ಗೆ 8ಕ್ಕೆ ದೇವಿಗೆ ಅಭೀಷೇಕ ಕಂಕಣ ವಿಸರ್ಜನೆ ಯೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಬೆಳಿಗ್ಗೆ ದೇವಸ್ಥಾನದಲ್ಲಿ ಅಮ್ಮನವರಿಗೆ ಅಭೀಷೇಕವ ನ್ನು ಮಾಡಿ ವಿವಿಧ ರೀತಿಯ ಹೂಗಳಿಂದ ಆಲಂಕಾರವ ನ್ನು ಮಾಡಲಾಗಿತು. ನಂತರ ದೇವಾಲಯದ ಹೊರಗಡೆ ಅಮ್ಮನವರನ್ನು ಕುದುರೆಯ ಮೇಲೆಕುಳ್ಳರಿಸಿ. ಅಮ್ಮ ನವರ ಮುಖ ಪದ್ಮ ಹಾಗೂ ತಲೆಗೆಬಂಗಾರದ ಕೀರಿಟ ದ ಮೇಲೆ ಐದು ಹೆಡೆ ನಾಗರ ದೇವಿಗೆ ದೈವಿಕಳೆ ಹೆಚ್ಚಿಸಿ ತ್ತು. ಶಾವಂತಿಗೆ, ಚಂಡೆ ಹೂ ಸೇರಿದಂತೆ ವಿವಿಧ ರೀತಿ ಯ ಹೂಗಳಿಂದ ದೇವಿಗೆ ಪ್ರಭಾವಳಿ ಆಲಂಕಾರವನ್ನು ಮಾಡಲಾಗಿತು. ಎರಡು ಕಡೆಗಳಲ್ಲಿ ನವೀಲಿನ ಆಕೃತಿ ಮತ್ತು ತಲೆಯ ಮೇಲೆ ಕಮಲದ ಆಕೃತಿಯನ್ನು ಅಲಂಕಾರ ಮಾಡಿದ್ದರು.
ಈ ಮೆರವಣಿಗೆಯಲ್ಲಿ ಮುಖ್ಯ ಆಕರ್ಷಣೆಯಾಗಿ ವೀರ ಗಾಸೆ,ಚಂಡೆ,ನಂದಿಧ್ವಜ, ಕೀಲು ಕುದುರೆ, ತಟ್ಟೆ ರಾಯ, ಉರುಮೆ,ಕಹಳೆ, ನಾದ ಸ್ವರ ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ತಂಡಗಳು ಭಾಗವಹಿಸಿದ್ದವು.ಈ ಜಾತ್ರೆಯಲ್ಲಿ ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್,ಮಾಜಿ ನಗರಸಭಾ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯರಾದ ಚಂದ್ರ ಶೇಖರ್, ವೇದ,ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎನ್.ಡಿ. ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.