ಬೆಂಗಳೂರು: ಬಳೆಪೇಟೆ ಉಪಹಾರ ದರ್ಶಿನಿ ಸಭಾಂಗಣದಲ್ಲಿ ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮ(ರಿ)ನ ರಾಜ್ಯಾದ್ಯಾಂತ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.ರಾಜ್ಯಾಧ್ಯಕ್ಷರಾಗಿ ಹೇಮಾವತಿ(ಹೇಮ ಶ್ರೀನಿವಾಸ್), ರಾಜ್ಯ ಉಪಾಧ್ಯಕ್ಷರಾಗಿ ಅಂಬಿಕಾ ವೆಂಕಟೇಶ್, ರಾಜ್ಯ ಖಜಾಂಚಿಯಾಗಿ ಗಾಯಿತ್ರಿ, ಬೆಂಗಳೂರು ನಗರಅಧ್ಯಕ್ಷೆ ವೀಣಾ ದಿಲೀಪ್, ಬೆಂಗಳೂರು ದಕ್ಷಿಣ ರೂಪಾ ಶಾಂತರಾಜ್, ಪ್ರಧಾನ ಕಾರ್ಯದರ್ಶಿ ನಾಗರತ್ನ, ಮೈಸೂರು ತಾಲ್ಲೂಕು ಅಧ್ಯಕ್ಷೆ ರಮಾ ರಮೇಶ್, ಮಂಡ್ಯ ತಾಲ್ಲೂಕು ಅಧ್ಯಕ್ಷೆ ಡಾ|| ಆಶಾ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ, ಖಜಾಂಚಿಯಾಗಿ ಜಯಲಕ್ಷ್ಮೀ, ಮದ್ದೂರು ತಾಲ್ಲೂಕು ಅಧ್ಯಕ್ಷೆ ಹೆಚ್.ಎಸ್ ರೂಪ, ಪ್ರಧಾನ ಕಾರ್ಯದರ್ಶಿ ಸವಿತ ನರಸಿಂಹ ಮೂರ್ತಿ, ಖಜಾಂಚಿ ಎನ್.ಚಿನ್ಮಯಿ, ಕುಣಿಗಲ್ ತಾಲ್ಲೂಕು ಅಧ್ಯಕ್ಷರಾಗಿ ರಶ್ಮಿ ದಿನೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಭಾರತಿ, ಉಪಾಧ್ಯಕ್ಷರಾಗಿ ಸಂಜಯ್, ಖಜಾಂಚಿ ಶ್ರೀಮತಿ ಸಂಜಯ್, ಹುಲಿಯೂರು ದುರ್ಗದ ಅಧ್ಯಕ್ಷೆ ಶೈಲಜ ಇವರುಗಳನ್ನು ನೇಮಕ ಮಾಡಲಾಯಿತು. ಕರ್ನಾಟಕ ರಾಜ್ಯ ಬಲಿಜ ಸಂಗಮದ ಗೌರವಾಧ್ಯಕ್ಷರುಗಳಾದ ಬಳೆಪೇಟೆ ವೆಂಕಟೇಶ್, ಬಸವನಗುಡಿ ಡಾ|| ತ್ಯಾಗರಾಜ್, ಮುಖ್ಯ ಅಥಿತಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಂ.ನರಸಿಂಹುಲು, ಹಾಲಿ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ನರಸಿಂಹುಲು, ಚಲನಚಿತ್ರ ನಿರ್ಮಾಪಕರಾದ ಜಿಗಣಿ ರಾಜಶೇಖರ್, ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸಮತಾ ಬಿ. ದೇಶಮಾನೆ, ಯೋಗಿನಾರಾಯಣ ಬ್ಯಾಂಕ್ ಅಧ್ಯಕ್ಷರಾದ ಅಚೀವರ್ ಎಸ್.ಶ್ರೀರಾಮುಲು ಇದ್ದರು.ಇದೇ ಸಂದರ್ಭದಲ್ಲಿ ಶ್ರೀ ನಟರಾಜ ರಾಜ್ಯ ಬಲಿಜ ಕಲಾಸಂಗಮದ ವತಿಯಿಂದ ಖ್ಯಾತ ಸಾಹಿತಿ ಕೆ.ವಿ. ರಾಜೇಶ್ವರಿ ರವರಿಗೆ, `ಕಲಾಶ್ರೇಷ್ಟ ಸಾಹಿತ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು ಸಮಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಜಿ.ಎಲ್.ಸಂಪಂಗಿ ರಾಮುಲು, ವಕೀಲರಾದ ನವೀನ್ ಕುಮಾರ್, ವಿಧಾನಸೌದ ಚಂದ್ರಮೋಹನ್, ಮಲ್ಲೇಶ್ವರಂ ಅಶೋಕ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಚಿತ್ರ: ಜಿ.ಎಲ್.ಸಂಪಂಗಿ ರಾಮುಲು
ಶ್ರೀನಟರಾಜ ರಾಜ್ಯ ಬಲಿಜ ಕಲಾ ಸಂಗಮ(ರಿ) ಪದಾಧಿಕಾರಿಗಳ ನೇಮಕ



