ಪೀಣ್ಯ ದಾಸರಹಳ್ಳಿ: ಅಂಬೇಡ್ಕರ್ ಬಸ್ ನಿಲ್ದಾಣ ಪೀಣ್ಯ 2 ನೆ ಹಂತ ಅಂಬೇಡ್ಕರ್ ಸರ್ಕಲ್ ನಲ್ಲಿ ದಲಿತ ಮುಖಂಡ ಕೆಂಪರಾಜು ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ರವರ ಸೊಸೆ ಶೃತಿ ಕಿರಣ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.
ನಂತರ ಗಾರ್ಮೆಂಟ್ಸ್ ಗೆ ತೆರಳಿ ಕಾರ್ಮಿಕರಿಗೆ ಸಿಹಿ ಹಂಚುವ ಮೂಲಕ ಆರ್ ಮಂಜುನಾಥ್ ರವರಿಗೆ ಮತ ನೀಡಲು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಜಿ.ಆಂಜನಪ್ಪ, ಸುನೀಲ್ ಕುಮಾರ್, ಸುರೇಶ್ ಬಾಬು, ಗಂಗಾನರಶಯ್ಯ, ನೀಲಾರಾಜು, ವಿಜಯ್ ಎಂ, ಮಂಜುನಾಥ್, ಸತೀಶ್, ಸುವರ್ಣ ಕೆ, ಇಂದ್ರ, ಬೇಬಿ ಮಹಾಲಕ್ಷ್ಮಿ, ರುಕ್ಮಿಣಿ, ಛಾಯಾ,ರಾಧಾ, ಪುಟ್ಟತಾಯಮ್ಮ ಮುಂತಾದ ಮುಖಂಡರು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿ ಆರ್ ಮಂಜುನಾಥ್ ಪರ ಮತ ಯಾಚಿಸಿದರು.
Leave a Review