ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ಶುಭ್ಮನ್ ಗಿಲ್ ಅವರು ತಮ್ಮ ಚೊಚ್ಚಲ ಸ್ವದೇಶಿ ಟೆಸ್ಟ್ ಸರಣಿಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ಅವರು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಎರಡನೇ
ಟೆಸ್ಟ್ ಪಂದ್ಯದ ಎರಡನೇ ದಿನದಂದು, ಗಿಲ್ ಅವರು ಟೆಸ್ಟ್ ಮಾದರಿಯಲ್ಲಿ ಭಾರತದಲ್ಲಿ ತಮ್ಮ ಮೊದಲ ಶತಕವನ್ನು ಪೂರೈಸಿದ್ದಾರೆ. ಶನಿವಾರದಂದು ವೆಸ್ಟ್
ಇಂಡೀಸ್ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಗಿಲ್, ೧೭೭ ಎಸೆತಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಈ ಶತಕದೊಂದಿಗೆ ಈ ವರ್ಷ nತಮ್ಮ ಐದನೇ ಟೆಸ್ಟ್ ಶತಕವನ್ನು ಗಳಿಸಿದ ಭಾರತದ ನಾಯಕ ಎಂಬ ಹೆಗ್ಗಳಿಕೆಗೂ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಈ ಶತಕದ ಮೂಲಕ ವಿರಾಟ್ ಕೊಹ್ಲಿ ಅವರ ಅಪರೂಪದ ಸಾಧನೆಯನ್ನು ಸರಿಗಟ್ಟಿದ್ದಾರೆ.
ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಯಕನಾಗಿ ಐದು ಟೆಸ್ಟ್ ಶತಕ ಬಾರಿಸಿದ ಭಾರತದ ಎರಡನೇ ನಾಯಕ ಇವರಾಗಿದ್ದಾರೆ. ಎಲೈಟ್ ಕ್ಲಬ್ಗೆ ಗಿಲ್ ಪ್ರವೇಶ ವಿರಾಟ್ ಕೊಹ್ಲಿ ಅವರು ತಮ್ಮ ನಾಯಕತ್ವದ ಅವಧಿಯಲ್ಲಿ ಎರಡು ಬಾರಿ?೨೦೧೭ ಮತ್ತು ೨೦೧೮ರಲ್ಲಿ ಈ ಮಹತ್ವದ ಮೈಲಿಗಲ್ಲನ್ನು ತಲುಪಿದ್ದರು. ಈಗ ಶುಭ್ಮನ್ ಗಿಲ್ ಅವರು ೨೦೨೫ ರಲ್ಲಿ ಈ ವಿಶೇಷ ಕ್ಲಬ್ಗೆ ಸೇರ್ಪಡೆಗೊಂಡಿದ್ದಾರೆ. ಇAಗ್ಲೆAಡ್ನ ಹಿಂದಿನ ಸರಣಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದ ಗಿಲ್
ಅವರಿಗೆ, ದೆಹಲಿಯ ಈ ಟೆಸ್ಟ್ ಶತಕವು ನಾಯಕನಾಗಿ ಅವರ ಐದನೇ ಶತಕವಾಗಿದೆ.
ಈ ಸಾಧನೆಯು ಗಿಲ್ ಅವರನ್ನು ಗಣ್ಯ ಆಟಗಾರರ ಸಾಲಿನಲ್ಲಿ ನಿಲ್ಲಿಸಿದೆ. ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ಶ್ರೇಷ್ಠ ನಾಯಕರು ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಇಷ್ಟು ಹೆಚ್ಚಿನ ವೇಗದಲ್ಲಿ ಶತಕಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತದ ನಾಯಕರಾಗಿ ಐದು ಟೆಸ್ಟ್ ಶತಕಗಳು ಮೂರು ಬಾರಿ ದಾಖಲಾಗಿವೆ. ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ೨೦೧೭ ಹಾಗೂ ೨೦೧೮ ರಲ್ಲಿ ಐದು ಶತಕಗಳ ಗೊಂಚಲನ್ನು ಪೂರೈಸಿದ್ದರು. ಆ ಬಳಿಕ ಶುಭಮನ್ ಗಿಲ್ ಅವರು ೨೦೨೫ರಲ್ಲಿ ಈ ಸಾಧನೆ ಮಾಡಿದ್ದಾರೆ.
೧೪ ಟೆಸ್ಟ್ನಲ್ಲಿ ೧೪ ಟೆಸ್ಟ್ಗಳಲ್ಲಿ ೨೫ ಟೆಸ್ಟ್ ಶತಕಗಳ ದಾಖಲೆ ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗಳಲ್ಲಿ ಶತಕಗಳ ಪ್ರವಾಹವೇ ಹರಿದಿದೆ.
೨೦೧೩ ರಿಂದ ಉಭಯ ದೇಶಗಳ ನಡುವೆ ನಡೆದ ಕಳೆದ ೧೪ ಟೆಸ್ಟ್ಗಳಲ್ಲಿ ೨೫ ಟೆಸ್ಟ್ ಶತಕಗಳು ದಾಖಲಾಗಿವೆ. ಇವುಗಳಲ್ಲಿ ೨೩ ಶತಕಗಳು ಭಾರತೀಯ ಬ್ಯಾಟರ್ಗಳಿಂದಲೇ ಬAದಿರುವುದು ವಿಶೇಷ. ಈ ಅವಧಿಯಲ್ಲಿ ಶತಕ ಗಳಿಸಿದ ಏಕೈಕ ವೆಸ್ಟ್ ಇಂಡೀಸ್ ಬ್ಯಾಟರ್ ಎಂದರೆ ರಾಸ್ಟನ್ ಚೇಸ್, ಅವರು ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.