ಮುಲ್ಲಾನ್ಪುರ: ಐಪಿಎಲ್ 2026ರ ನಾಲ್ಕನೇ ಪಂದ್ಯದಲ್ಲಿ ಕಳೆದ ಸೀಸನ್ ನ ರನ್ನರ್- ಅಪ್ ತಂಡವಾದ ಪಂಜಾಬ್ ಕಿಂಗ್ಸ್ ಮತ್ತು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಲ್ಲಾನಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿ ಉಭಯ ತಂಡಗಳಿಗೂ ಈ ಋತುವಿನ ಶುಭಾರಂಭಕ್ಕೆ ಮಹತ್ವದ ವೇದಿಕೆಯಾಗಿದೆ. ಮತ್ತೊಂದು ರೀತಿಯಲ್ಲಿ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ನಡುವಿನ ಜಟಾಪಟಿ ಎಂದೇ ಬಣ್ಣಿಸಲ್ಪಟ್ಟಿದೆ.
ಕಳೆದ ಆವೃತ್ತಿಯ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೇವಲ 6 ರನ್ಗಳಿಂದ ಪರಾಭವಗೊಂದು ಪ್ರಶಸ್ತಿಯಿಂದ ವಂಚಿತವಾಗಿದ್ದ ಪಂಜಾಬ್ ಕಿಂಗ್ಸ್, ಈ ಬಾರಿ ಶುಭಾರಂಭವನ್ನು ನಿರೀಕ್ಷಿಸುತ್ತಿದೆ. ಅನುಭವಿ ಶ್ರೇಯಸ್ ಅಯ್ಯರ್ ನೇತೃತ್ವದ ಈ ತಂಡದಲ್ಲಿ ಅರ್ಶದೀಪ್ ಸಿಂಗ್ ಅವರಂತಹ ಅನುಭವಿ ವೇಗಿಗಳಿದ್ದಾರೆ. ಮಿನಿ ಹರಾಜಿನಲ್ಲಿ ಕೂಪರ್ ಕೊನ್ನೊಲಿ ಹಾಗೂ ಬೆನ್ ದ್ವಾರ್ಶಿಯಸ್ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಂಡ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಸದ್ಯಕ್ಕೆ ಲಾಕಿ ಫರ್ಗುಸನ್ ಲಭ್ಯವಿಲ್ಲದಿರುವುದು ತಂಡಕ್ಕೆ ಸಣ್ಣ ಹಿನ್ನಡೆಯಾದರೂ, ಪ್ಲೇಆಫ್ ಪ್ರವೇಶಿಸುವ ಪೇವರಿಟ್ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಮುಂಚೂಣಿಯಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳು ಪರಸ್ಪರ 6 ಬಾರಿ ಮುಖಾಮುಖಿಯಾಗಿದ್ದು, ತಲಾ 3 ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಸಮಬಲದ ಹೋರಾಟ ಪ್ರದರ್ಶಿಸಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಮುನ್ನಡೆ ಸಾಧಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಪಿಚ್ ಮತ್ತು ಅಂಕಿಅAಶ
ಮುಲ್ಲಾನ್ಪುರದ ಕ್ರೀಡಾಂಗಣ ಸಮತೋಲಿತ ಪಿಚ್ ಅನ್ನು ಹೊಂದಿದೆ. ಇದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಪೂರಕವಾಗಿದೆ.
ಶ್ರೇಯಸ್ ಅಯ್ಯರ್ಗೆ ಶುಭ್ಮನ್ ಗಿಲ್ ಸವಾಲು



