ಬೆಂಗಳೂರು: ಜ್ಞಾನ ಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವಿಜಯ ನಗರ ಇವರ ಸಹಯೋಗದಲ್ಲಿ “ಹಂಪಿಯಲ್ಲಿ ಕಲ್ಲಿನ ರಥ, ನಮ್ಮದು ಕನ್ನಡ ಪಥ” ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಲೇಖಕರು, ಚಿಂತಕರು, ಅಂಕಣಕಾರರು ಹಾಗೂ ಜ್ಞಾನ ಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷರಾದ ಮಣ್ಣೆ ಮೋಹನ್ ರವರು ಮಾತನಾಡುತ್ತಾ “ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪಿ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ.
ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು ಆದರೆ ಇಂದು ಹಂಪಿ ವಿಶ್ವಮಟ್ಟದಲ್ಲಿ ಪಾರಂಪರಿಕ ಸ್ಥಳವಾಗಿ ಎಲ್ಲಾ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಾಗೇ ಪ್ರಬುದ್ದತೆ ಕಾಪಾಡಿಕೊಂಡಿರುವುದು ನಮ್ಮ ಹೆಮ್ಮೆ ಆಗಿದೆ. ಇಂತಹ ಭವ್ಯ ಇತಿಹಾಸ ಇರುವ ಸ್ಥಳದಲ್ಲಿ ಚಿನ್ನದ ಜಿಲ್ಲೆ ಕೋಲಾರದ ಮಾಲೂರಿನ ಶ್ವೇತಾಂಜಲಿ ಭರತನಾಟ್ಯ ಶಾಲೆ ತಮ್ಮ ಶಾಲೆಯ ಪ್ರತಿಭಾನ್ವಿತ ಭರತನಾಟ್ಯ ನೃತ್ಯ ಪಟುಗಳನ್ನು ಕರೆಸಿ ಅದ್ಬುತ ನೃತ್ಯ ಮಾಡಿಸಿ ಕಾರ್ಯಕ್ರಮಕ್ಕೆ ವಿಶೇಷ ರಂಗು ತರಲಾಯಿತು” ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ “ವಿಶ್ವಮಟ್ಟದಲ್ಲಿ ಅತಿ ಹೆಚ್ಚು ಪ್ರಸಿದ್ದಿಗೆ ಕಾರಣವಾಗಿರುವ ಹಂಪಿ ಇಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಭರತನಾಟ್ಯ ನೃತ್ಯ ಪ್ರದರ್ಶನಕ್ಕೆ ಒಂದು ಉತ್ತಮ ಅವಕಾಶವನ್ನು ಒದಗಿಸಿ ವೇದಿಕೆಯಲ್ಲಿ ಕನ್ನಡ ಆಸಕ್ತರು, ಸಾಹಿತ್ಯ ಆಸಕ್ತರ ನಡುವೆ ಅದ್ದೂರಿ ನೃತ್ಯಗಳನ್ನು ಪ್ರದರ್ಶಿಸಿದ್ದು ನಮಗೆ ಬಹಳ ಹೆಮ್ಮೆ ಎನಿಸಿತು.
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿನ ಈ ಕಾರ್ಯಕ್ರಮ ಸದಾ ಕಾಲ ಅಚ್ಚಳಿಯದಂತೆ ಅಮರ” ಎಂದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ ಮಾಲೂರು, ಚಿಕ್ಕತಿರುಪತಿ, ದುನ್ನಸಂದ್ರ ಕ್ರಾಸ್ ಮಕ್ಕಳಾದ ಕು.ತಾನೀಶ್.ಎನ್, ಕು.ಹನ್ಸಿಕ, ಕು.ರಕ್ಷಗೌಡ, ಕು.ಮೋಕ್ಷ ಗೌಡ, ಕು.ಮೌಲ್ಯ, ಕು.ಸಾನ್ವಿ, ಕು.ರಿಷ ಕು.ಐಸಿರಿ, ಕು.ಗುಣಪ್ರಿಯ.ಎಂ, ಕು.ಧೃತಿ, ಕು.ಮಧುಮೀತ. ಇವರಿಂದ ಭಾರತೀಯ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ಹಾಡುಗಳಿಗೆ ನೃತ್ಯ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಪೋಷಕರೊಂದಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ನೆಲಮಂಗಲ ಕಸಾಪ ಅಧ್ಯಕ್ಷರಾದ ಬಿ.ಪ್ರಕಾಶ್ ಮೂರ್ತಿ, ಕಸಾಪ ಬಳ್ಳಾರಿ ಅಧ್ಯಕ್ಷರಾದ ನಿಷ್ಟಿರುದ್ರಪ್ಪ, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಹಾಗೂ ಯುವ ಕವಿ ಲಕ್ಕೂರು ಎಂ.ನಾಗರಾಜ್ ಹಾಜರಿದ್ದರು.