ಕೋಲಾರ: ಕರ್ನಾಟಕದ ಅಸ್ಮಿತೆಯಾಗಿರುವ ಕೋಮುಲ್ ಸಂಸ್ಥೆಯನ್ನು ಹಾಳುಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಚು ನಡೆಸಿದ್ದಾರೆ. ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳನ್ನು ಮಾರಾಟ ಮಾಡಲು ಷಾ ಇಲ್ಲಿನ ಸರ್ಕಾರ ಮತ್ತು ಕೆಎಂಎಫ್‍ಗೆ ಸೂಚನೆ ನೀಡಿದ್ದಾರೆ. ಅಮಿತ್ ಷಾ ರವರ ಈ ಸೂಚನೆಯನ್ನು ಧಿಕ್ಕರಿಸಬೇಕು. ಅಲ್ಲದೆ ಕರ್ನಾಟಕದ ಹಿತಾಸಕ್ತಿ ಮತ್ತು ಅಸ್ಮಿತೆಯನ್ನು ಕಾಪಾಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಮನವಿ ಮಾಡಿದರು.
ಕೋಲಾರ ನಗರದಲ್ಲಿ ಭಾನುವಾರ ನಡೆದ ಜೈ ಭಾರತ್ ರ್ಯಾಲಿಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ಸ್ಥಾಪಿಸಲಾದ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕುಗಳ ಅಸ್ತಿತ್ವ ಕಳೆದುಕೊಂಡಿದೆ. ಆ ಬ್ಯಾಂಕುಗಳನ್ನು ಗುಜರಾತ್ ಮೂಲದ ಬ್ಯಾಂಕುಗಳೊಂದಿಗೆ ವಿಲೀನ ಮಾಡಲಾಗಿದೆ. ಈಗ ಕೆಎಂಎಫ್ ಮತ್ತು ಮೂಮುಲ್ ವಿಲೀನಕ್ಕೆ ಸಂಚು ನಡೆದಿದೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.
ನಾವೆಲ್ಲರೂ ಕನ್ನಡಿಗರು. ಅಮುಲ್ ಅನ್ನು ಕೊಳ್ಳದೆಯೇ ನಂದಿನಿಯನ್ನು ಮಾತ್ರ ಕೊಂಡುಕೊಳ್ಳೋಣ. ಕರ್ನಾಟಕದ ಜನ ಈ ಬಗ್ಗೆ ಒಂದು ತೀರ್ಮಾನ ಮಾಡಲೇಬೇಕು. ಶಪಥ ಮಾಡಬೇಕು. ಹೀಗೆ ಮಾಡಿದರೆ ಕೆಎಂಎಫ್ ಉಳಿಯುತ್ತದೆ. ಅದೇ ರೀತಿ ಕನ್ನಡಗಿರ, ನಮ್ಮ ರೈತರ ಅಸ್ಮಿತೆಯೂ ಉಳಿಯುತ್ತದೆ. ಈ ಮೂಲಕ ಕೇಂದ್ರ ಸರಕಾರ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹುನ್ನಾರವನ್ನು ತಡೆಗಟ್ಟಲು ಸಾಧ್ಯ ಎಂದು ಸಲಹೆ ನೀಡಿದರು. ಎಂದರು.
Leave a Review