ಕೆ.ಆರ್.ನಗರ : ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ನೀಡಲಾಗುತ್ತಿದ್ದ ಸೌಲಭ್ಯಗಳನ್ನು ಮೊಟಕುಗೊಳಿಸುವ ಪ್ರಯತ್ನ ಬಿಟ್ಟು ಈಗಿನ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ತಾಲೂಕು ಕಛೇರಿ ಮುಂಭಾದಲ್ಲಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುರೇಂದ್ರಮೂರ್ತಿ ರವರಿಗೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಛೇರಿ ಮುಂಭಾಗದಲ್ಲಿ ಏರ್ಪಡಿಸಿದ್ದ ಪ್ರತಿಭಟನೆ ಸಭೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಎಸ್. ಸಣ್ಣಲಿಂಗಪ್ಪ ಮಾತನಾಡಿ ನಿವೃತ್ತ ನೌಕರರಿಗೆ ಪಿಂಚಣಿ, ತುಟ್ಟಿಭತ್ಯೆ, ಆರೋಗ್ಯ ಸೇವೆ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಕೇಂದ್ರ ಹಣಕಾಸು ಸಚಿ ನಿರ್ಮಲ ಸೀತಾರಾಮನ್ ರವರು ವಿಷಯ ಮಂಡನೆ ಮಾಡಿ 2026ರ ಹಿಂದೆ ನಿವೃತ್ತರಾದವರಿಗೆ ಯಾವುದೇ ಸೌಲಭ್ಯ ತುಟ್ಟಿಭತ್ಯೆ ಹಾಗೂ ವೇತನ ಪರಿಷ್ಕರಣೆ ವೇತನ ನೀಡಲಾಗುವುದಿಲ್ಲ ಎಂದು ವಿಷಯವನ್ನು ಮಂಡಿಸಿದ್ದಾರೆ. ಈ ಮಂಡನೆ ಅವೈಜ್ಞಾನಿಕವಾಗಿದ್ದು ಇದರ ವಿರುದ್ದ ಕೇಂದ್ರ ಸಂಘದ ಆದೇಶದಂತೆ ದೇಶದ್ಯಾಂತಹ ಪ್ರತಿಭಟನೆ ನಡೆಸಲಾಗುತ್ತದೆ. ಕೂಡಲೇ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಸೀತರಾಮ್ರವರಲ್ಲಿ ಮನವಿ ಈ ವಿಷಯದ ಮಂಡನೆಯನ್ನು ಕೈಬಿಟ್ಟು ಈ ಹಿಂದೆ ಸರ್ಕಾರ ನಿವೃತ್ತ ನೌಕರರಿಗೆ ನೀಡುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿವುದರ ಜತೆಗೆ ಮನವಿಯನ್ನು ಪುರಸ್ಕರಿಸಿ ಎಲ್ಲಾ ಸೌಲಭ್ಯಗಳನ್ನು ಎಂದಿನAತೆ ನೀಡುವುದಲ್ಲದೆ ಪ್ರತಿ ವರ್ಷ 2 ತುಟ್ಟಿ ಭತ್ಯೆ ಹಾಗೂ 8ನೇ ವೇತನ ಪರಿಷ್ಕರಣೆ ಮಾಡಿ ಕೋರ್ಟ್ ತೀರ್ಪಿಗೆ ಮಾನ್ಯತೆ ನೀಡುವಂತೆ ಪ್ರಧಾನ ಮಂತ್ರಿಗಳು ಹಾಗೂ ಗೃಹಸಚಿವರಿಗೆ ಮನವಿ ಮಾಡಿದರು. ನಿವೃತ್ತ ನೌಕರರಿಗೆ ದೊರೆಯುವ ಸೌಲಭ್ಯ ತಪ್ಪಿದಲ್ಲಿ ದೇಶದ್ಯಾಂತ ಒಗ್ಗೂಡಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಎಸ್.ಸಣ್ಣಲಿಂಗಪ್ಪ, ಗೌರವ ಅಧ್ಯಕ್ಷ ಮಿರ್ಲೆ ಎಂ.ಬಿ.ಲೋಕನಾಥ್, ಉಪಾಧ್ಯಕ್ಷ ಎ.ಚಂದ್ರಶೇಖರ್, ಖಜಾಂಚಿ ಚಂದ್ರಕುಮಾರ್, ಪದಾಧಿಕಾರಿಗಳಾದ ತಿಮ್ಮಶೆಟ್ಟಿ,ಕೆ.ಎಸ್.ಮಲ್ಲಪ್ಪ, ನಿರ್ದೇರ್ಶಕರಾದ ಗಣೇಶ್, ಪ್ರಸನ್ನ, ರಾಮು,ಸೋಮಶೇಖರ್, ಎಂ.ಎಸ್.ಪುಟ್ಟರಾಜು, ಎಂ.ಬಿ.ಸೋಮಶೇಖರ್, ಎಸ್.ಟಿ.ತಮ್ಮಣ್ಣೇಗೌಡ, ಮಾಸ್ಟರ್ ಅಣ್ಣೇಗೌಡ, ಟಿಎಂಸಿಶ್ರೀನಿವಾಸ್, ಕೃಷ್ಣೇಗೌಡ ಹಾಗೂ ನಿವೃತ್ತ ನೌಕರರ ಬಂಧುಗಳು ಹಾಜರಿದ್ದರು.
ನಿವೃತ್ತ ನೌಕರರ ಈಗಿನ ಸೌಲಭ್ಯಗಳನ್ನು ಮುಂದುವರಿಸಲು ನಿವೃತ್ತ ನೌಕರರ ಸಂಘದ ವತಿಯಿಂದ ಮೌನಪ್ರತಿಭಟನೆ



