ನವದೆಹಲಿ: ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಆರ್ಚರಿಪಟು ಶೀತಲ್ ದೇವಿ ಅವರು ಖೇಲೊ ಇಂಡಿಯಾ ಎನ್ಟಿಪಿಸಿ ರಾಷ್ಟ್ರೀಯ ರ್ಯಾಂಕಿಂಗ್ ಆರ್ಚರಿ ಕೂಟದಲ್ಲಿ ಬೆಳ್ಳಿ ಗೆದ್ದುಕೊಂಡರು. ಹರಿಯಾಣದ ಜೂನಿಯರ್ ವಿಶ್ವ ಚಾಂಪಿಯನ್ ಏಕ್ತಾ ರಾಣಿ ಚಿನ್ನದ ಪದಕ ಗೆದ್ದರು.
ಇಲ್ಲಿನ ಡಿಡಿಎ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಬುಧವಾರ ನಡೆದ ವೈಯಕ್ತಿಕ ಕಾಂಪೌಂಡ್ ವಿಭಾಗದ ಫೈನಲ್ನಲ್ಲಿ 17 ವರ್ಷದ ಶೀತಲ್ ಅವರು ಏಕ್ತಾ ವಿರುದ್ಧ 138- 140 ಪಾಯಿಂಟ್ಸ್ಗಳಿಂದ ಪರಾಭವಗೊಂಡರು.
ಏಕ್ತಾ ಮತ್ತು ಶೀತಲ್ ಕ್ರಮವಾಗಿ ರೂ 50 ಸಾವಿರ ಮತ್ತು ರೂ.40 ಸಾವಿರ ಬಹುಮಾನ ಪಡೆದರು. ಖೇಲೊ ಇಂಡಿಯಾ ಏಬಲ್ ಬಾಡಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ಯಾರಾ ಆರ್ಚರಿಪಟು ಶೀತಲ್ ದೇವಿಗೆ ಚಿನ್ನ (125)