ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ 2023ರ ಇಂಡಿಯಾ ಟೇಕ್ವಾಂಡೋ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್‍ನಲ್ಲಿ ಬೆಂಗಳೂರು ನಗರದ ಸಿಎಂಆರ್ ವಿಶ್ವವಿದ್ಯಾಲಯದ ಮೂರನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಮುಖೇಶ್ ಕುಮಾರ್ ಖಡ್ಕ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ.
ಮಹಾರಾಷ್ಟ್ರದ ನಾಸಿಕ್‍ನಲ್ಲಿ ಟೇಕ್ವಾಂಡೋ ಅಸೋಸಿಯೇಷನ್ ಆಯೋಜಿಸಿದ್ದ 87ಕೆಜಿ ವಿಭಾಗದ ಈ ಚಾಂಪಿಯನ್ ಶಿಪ್‍ನಲ್ಲಿ ಸಿಎಂಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖೇಶ್ ಕುಮಾರ್ ಖಡ್ಕ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ಬೆಳ್ಳಿಪದಕವನ್ನು ಕೊರಳಿಗೇರಿಸಿಕೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡುವ ಮೂಲಕ ಸಿಎಂಆರ್ ವಿಶ್ವವಿದ್ಯಾಲಯದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿರುವ ಸಿಎಂಆರ್ ವಿಶ್ವವಿದ್ಯಾಲಯ ಮೂರನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಮುಖೇಶ್ ಕುಮಾರ್ ಖಡ್ಕ ಸಾಧನೆಯನ್ನು ಸಿಎಂಆರ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಅಧ್ಯಾಪಕರು ಅಭಿನಂದಿಸಿದ್ದಾರೆ.
ಇನ್ನೂ ವಿದ್ಯಾರ್ಥಿಯ ಕ್ರೀಡಾ ಸಾಧನೆ ಕುರಿತು ಮಾತನಾಡಿದ ಸಿಎಂಆರ್ ವಿವಿಯ ಉಪಕುಲಪತಿ ಡಾ.ರಾಘವೇಂದ್ರ ಎಚ್.ಬಿ ಅವರು ನಿರಂತರ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ವಿದ್ಯಾರ್ಥಿ ಮುಖೇಶ್ ಕುಮಾರ್ ಖಡ್ಕ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ವಿದ್ಯಾರ್ಥಿಗಳ ಆಯ್ಕೆ ಮತ್ತು ಆಸಕ್ತಿ ಕ್ಷೇತ್ರಕ್ಕೆ ಪೂರಕವಾಗಿ ಸಾಧನೆ ಮಾಡಲು ನಾವು ಎಲ್ಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತೇವೆ ಮತ್ತು ವೇದಿಕೆ ಕಲ್ಪಿಸಿಕೊಡುತ್ತೇವೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.
Leave a Review