This is the title of the web page
This is the title of the web page

ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಿಮ್ರಾನ್, ರಿತಿಕಾ

ಉದಯೋನ್ಮುಖ ಡಬಲ್ಸ್ ಜೋಡಿ ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಠಕ್ಕರ್ ಅವರು ವಿಯೆಟ್ನಾಂ ಓಪನ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಡಬಲ್ಸ್‍ನಲ್ಲಿ ಗುರುವಾರ ಎಂಟರ ಘಟ್ಟ ತಲುಪಿದರು.

ಮೂರನೇ ಶ್ರೇಯಾಂಕದ ಸಿಮ್ರಾನ್- ರಿತಿಕಾ ಜೋಡಿ ಎರಡನೇ ಸುತ್ತಿನಲ್ಲಿ 21-10, 21-18ರಿಂದ ಮಲೇಷ್ಯಾದ ಲೀ ಝಿ ಕ್ವಿಂಗ್ ಮತ್ತು ಡಿಸಿರಿ ಹಾವೊ ಶಾನ್ ಸಿಯೊ ಜೋಡಿಯನ್ನು ಸೋಲಿಸಿತು. ಇವರು ಕ್ವಾರ್ಟರ್‍ಫೈನಲ್‍ನಲ್ಲಿ ಚೀನಾ ತೈಪೆಯ ಜಿಯಾಂಗ್ ಯಿ-ಹುನಾ ಮತ್ತು ಲಿ ಝಿ ಕ್ವಿನ್ ಅವರನ್ನು ಎದುರಿಸಲಿದ್ದಾರೆ.

ಆದರೆ ಭಾರತದ ಇತರ ಆಟಗಾರ್ತಿಯರು ಗಂಟುಮೂಟೆ ಕಟ್ಟಿದರು. ಅದಿತಿ ಭಟ್ 14-21, 21-23ರಲ್ಲಿ ಮ್ಯಾನ್‍ಮಾರ್‍ನ ಥೆಟ್ ಟರ್ ತುಝರ್ ಅವರಿಗೆ ಮಣಿದರೆ, ತಾನ್ಯಾ ಹೇಮಂತ್ 17-21, 12-21ರಲ್ಲಿ ಜಪಾನಿನ ಮನಾಮಿ ಸುಯಿಝು ಅವರಿಗೆ ಶರಣಾದರು.