ಚಿತ್ರದುರ್ಗ: ಬಿಜೆಪಿ ಪಕ್ಷದ ಪದಾಧಿ ಕಾರಿಗಳು ಹಾಗೂ ಶಾಸಕರುಮತ್ತು ಮಾಜಿ ಶಾಸಕರನ್ನು ಬೇಟಿ ಮಾಡಿ. ಬಿಜೆಪಿ ಪಕ್ಷ ಸೇರುವ ಬಗ್ಗೆ,ಬಿಜೆಪಿ ಪ್ರಮುಖ ಜಿಲ್ಲಾ ಜನಪ್ರತಿನಿಧಿ ನಗಳು ಹಾಗೂ ಮುಖಂಡರ ಜೊತೆ ಚರ್ಚಿಸಿದ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಪರಾಜಿತ ಅಭ್ಯರ್ಥಿ. ಕೆ.ಟಿ.ಕುಮಾರಸ್ವಾಮಿ.
ಕಳೆದ ಬಾರಿ ಚಳ್ಳಕೆರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ವಂಚಿತರಾಗಿ.ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ.ಮಾಜಿ ಸಚಿವ ದಿ.ತಿಪ್ಪೇಸ್ವಾಮಿ ಅವರ ಸುಪುತ್ರ ಕೆ.ಟಿ.ಕುಮಾರಸ್ವಾಮಿ ಅವರು ಜಿಲ್ಲೆ ಯ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಹಾಗೂ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಪಕ್ಷಕ್ಕೆ ಬರುವಂತ ಆಹ್ವಾನ ನೀಡಿದ ಮೇರೆಗೆ.
ಚಿತ್ರದುರ್ಗ ನಗರದಲ್ಲಿ ಹೊಳಲ್ಕೆರೆ ಹಿರಿಯ ಶಾಸಕ ಡಾ.ಚಂದ್ರಪ್ಪ,ವಿಧಾನ ಪರಿಷತ್ ಸದಸ್ಯ ನವೀನ್, ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ಚಿತ್ರದುರ್ಗ ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ ಅವರ ನಿವಾಸಗಳಿಗೆ ಬೇಟಿ ಕೊಟ್ಟು.ಅಧಿಕೃತವಾಗಿ ಪಕ್ಷ ಸೇರುವ ಬಗ್ಗೆ ಚರ್ಚಿಸಿ ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ. ಕೆ.ಟಿ. ಕುಮಾರಸ್ವಾಮಿ ಅವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ. ಜಿಲ್ಲೆಯಾದ್ಯಂತ ತಮ್ಮದೇ ಅನುಯಾ ಯಿಗಳನ್ನು ಹಾಗೂ ಬೆಂಬಲಿಗರನ್ನು ಹೊಂದಿದ್ದಾರೆ. ಇವರು ಬಿಜೆಪಿ ಪಕ್ಷಕ್ಕೆ ಬರುವುದ ರಿಂದ ಪಕ್ಷಕ್ಕೆ ಭೀಮ ಬಲ ಬಂದಿದೆ ಎಂದು ಹೇಳಿದರು. ಹಾಗೂ ಏಪ್ರಿಲ್ 13ರ ಶನಿವಾರ ಚಳ್ಳಕೆರೆಯಲ್ಲಿ ಪ್ರಚಾರ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರುವುದರಿಂದ. ಅವರ ಸಮ್ಮುಖದಲ್ಲಿ,ಕೆ.ಟಿ.ಕುಮಾರ ಸ್ವಾಮಿ ಅವರನ್ನು ಅಧಿಕೃತವಾಗಿ,ಪಕ್ಷಕ್ಕೆ ಸೇರಿಸಿಕೊಳ್ಳ ಲಾಗುವುದು ಎಂದು ಹೇಳಿದರು.
ಈ ಭೇಟಿಯ ವೇಳೆ ಎಲ್ಲಾ ಬಿಜೆಪಿ ನಾಯಕರನ್ನು ಕೆ.ಟಿ. ಕುಮಾರಸ್ವಾಮಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಬೇಟಿಯ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್, ಚಳ್ಳಕೆರೆಯ ಬಿಜೆಪಿ ಮುಖಂಡರಾದ ಜಯಪಾಲಯ್ಯ,ವೆಂಕಟೇಶ್ ಯಾದವ್,ಶಿವಪುತ್ರಪ್ಪ,ಮಾಡ ನಾಯಕನಹಳ್ಳಿ ದೇವ ರಾಜ್, ಬೊಚ್ಛಾ ಬೋರನ ಹಟ್ಟಿ ಬೋರಯ್ಯ, ಚಳ್ಳಕೆರೆ ಬಿ.ಎಂ. ಶ್ರೀನಿವಾಸ್,ಬಂಡೆರಂಗಪ್ಪ,ಚನ್ನಕೇಶವ,ಮಧು, ಪ್ರಶಾಂತ್ ಇತರ ಮುಖಂಡರು ಉಪಸ್ಥಿತರಿದ್ದರು.