This is the title of the web page
This is the title of the web page

ಸಿಂಗಾಪುರ್ ಸ್ಮ್ಯಾಶ್ ಟೇಬಲ್ ಟೆನಿಸ್: ಭಾರತದ ಆಟ ಅಂತ್ಯ

ಸಿಂಗಾಪುರ: `ಸಿಂಗಾಪುರ್ ಸ್ಮ್ಯಾಶ್ ಟೇಬಲ್ ಟೆನಿಸ್’ ಪಂದ್ಯಾವಳಿಯಲ್ಲಿ ಭಾರತದ ಆಟ ಕೊನೆಗೊಂಡಿದೆ. ಮಣಿಕಾ ಬಾತ್ರಾ ವನಿತಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‍ನಲ್ಲಿ ಸೋಲುವುದರೊಂದಿಗೆ ಭಾರತ ಕೂಟದಿಂದ ನಿರ್ಗಮಿಸಿತು. ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‍ನಲ್ಲಿ ಮಣಿಕಾ ಬಾತ್ರಾ-ಜಿ.

ಸಥಿಯನ್ ಜಪಾನ್‍ನ ಹಿನಾ ಹಯಾಟಾ-ಟೊಮೊಕಾಝ ಹರಿಮೊಟೊ ವಿರುದ್ಧ 2-3 ಅಂತರದ ಸೋಲನುಭವಿಸಿದರು (9-11, 9-11, 11-8, 11-5, 7-11). ಜಪಾನ್ ಜೋಡಿ ಹಾಲಿ ವಿಶ್ವ ಚಾಂಪಿಯನ್‍ಶಿಪ್ ರನ್ನರ್ ಅಪ್ ಆಗಿದೆ.
ಭಾರತೀಯ ಜೋಡಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. 16ರ ಸುತ್ತಿನಲ್ಲಿ ಸಿಂಗಾಪುರ್ ಜೋಡಿಯನ್ನು ಮಣಿಸಿತ್ತು.