ದಾಬಸ್ ಪೇಟೆ: ತನ್ನದೆ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು, ಬೈಕ್ ಹೊತ್ತಿ ಉರಿಯುವುದನ್ನ ನೋಡುತ್ತಾ ಯುವಕನೊರ್ವ ನಿಂತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಲಕ್ಷಣ ಘಟನೆ ಇದಾಗಿದೆ.
ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯ ಹೆಬ್ಬಾಗಿಲಿನ, ಸರ್ಕಲ್ ಬಳಿ ಡಿಯೋ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ, ಬೆಂಕಿ ಹಚ್ಚಿದ ಯುವಕನನ್ನ ಶಿವಗಂಗೆಯ ನಿವಾಸಿ ಚೇತನ್ ಎಂದು ತಿಳಿದು ಬಂದಿದೆ, 15 ದಿನಗಳ ಹಿಂದೆ ಡಿಯೋ ಬೈಕ್ ಖರೀದಿಸಿದ ಆತ, ಶಿವಗಂಗೆಯ ಸರ್ಕಲ್ ಬಳಿ ಡಿಯೋ ಗಾಡಿ ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ, ಯಾವ ಕಾರಣಕ್ಕೆ ಡಿಯೋ ಗಾಡಿಗೆ ಬೆಂಕಿ ಇಟ್ಟಿದ್ದಾನೆಂಬುದು ತಿಳಿದು ಬಂದಿಲ್ಲ.
ಪೊಲೀಸರ ತನಿಖೆಯಿಂದ ನಿಖರ ಕಾರಣ ತಿಳಿದುಬರಬೇಕಾಗಿದೆ, ಸಾರ್ವಜನಿಕ ವಲಯದಲ್ಲಿ ಈ ವಿಚಾರ ಬಾರಿ ಚರ್ಚೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಘಟನೆ ಕಡಿವಾಣ ಹಾಕಬೇಕಾಗಿದೆ, ದಾಬಸ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.