ಮೈಸೂರು: ಸುದ್ದಿ ಮನೆಯಲ್ಲಿ ವಿಫುಲ ಅವಕಾ ಶಗಳಿದ್ದು ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಒರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಮೊದಲ ಬಾರಿಗೆ ಪತ್ರಿಕೆ ವಿತರಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ನನಗೆ ಖುಷಿ ತಂದಿದೆ ಎಂದರು.ನೀವು ಈ ಬಾರಿ ವಿಶ್ವಕಪ್ ಗೆಲ್ಲಲಿ ಎಂಬ ಆಶಯವನ್ನ ಇಟ್ಟುಕೊಂಡಿದ್ದೀರಿ ಆದರೆ ಸೋತಿದ್ದರುವುದು ಬೇಸರವಿದೆ. ಹಾಗಂತ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ ಎಂದರು. ಒಬ್ಬ ಪತ್ರಕರ್ತನಿಗೆ ಎಂಥದ್ದೆ ಸವಾಲು ಮತ್ತು ಆಘಾತ ಗಳನ್ನು ಎದುರಿಸುವ ಶಕ್ತಿ ಇರಬೇಕು ಎಂದರು.
ಈ ಜಗತ್ತಿನಲ್ಲಿ ಎಲ್ಲಾ ಪಾಠಗಳಿಗಿಂತ ಹಸಿವಿನ ಪಾಠ ಎಲ್ಲವನ್ನು ಕಲಿಸುತ್ತದೆ ಇದರ ಜೊತೆಗೆ ಜ್ಞಾನದ ಹಸಿವನ್ನು ಕೂಡ ನೀವು ನೀಗಿಸಕೊಳ್ಳಬೇಕು ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ಪ್ರವೇಶಾತಿ ಪಡೆದಿರುವ ನಿಮಗೆಲ್ಲಾ ಶುಭವಾಗಲಿ ಎಂದು ಹಾರೈಸಿದರು.
ನೀವು ಕುಂತಲ್ಲೇ ಎಲ್ಲಾವನ್ನು ನೋಡುವ ಅವಕಾಶ ಇಂದಿನ ಸಾಮಾಜಿಕಜಾಲತಾಣಗಳ ಮೂಲಕ ಸಿಗುತ್ತದೆ , ಆದರೆ ನಾವು ಇಂದಿನ ದಿನಮಾನಗಳಲ್ಲಿ ಸುದ್ದಿಗಳನ್ನು ಕಳುಹಿಸುವಾಗ ಒಮ್ಮೆ ಪರೀಕ್ಷಿಸಿ, ಅವಲೋಕಿಸಿ ನಂತರ ಕಳುಹಿಸಬೇಕು ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ನೀವು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಮುಂಚೆ ನೀವು ಉತ್ತಮ ಜ್ಞಾನ ಮತ್ತು ಬರವಣಿಗೆ ಕೌಶಲ್ಯಗಳನ್ನ ಉತ್ತಮಪಡಿಸಿಕೊಳ್ಳಬೇಕು ಎಂದರು.ನಮ್ಮ ಪತ್ರಕರ್ತರು ಕರೋನಾ ಸಂದರ್ಭದಲ್ಲಿ ಅನೇಕ ಸಾವು ನೋವುಗಳನ್ನು ವರದಿ ಮಾಡಬೇಕಾದಾಗ ದೃತಿಗೆಡದೇ ತಮ್ಮ ಕುಟುಂಬಗಳನ್ನು ತೊರೆದು ಸುದ್ದಿಗಳನ್ನ ಜನತೆಗೆ ತಲುಪಿಸುವಲ್ಲಿ ಶ್ರಮ ಪಟ್ಟಿದ್ದಾರೆ ಅವರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.
ಪತ್ರಕರ್ತರು ತಮ್ಮ ವೃತ್ತಿಜೀವನದಲ್ಲಿ ಛಾಪನ್ನು ಒತ್ತ ಬೇಕಾದರೆ ವೃತ್ತಿಜೀವನದಲ್ಲಿ ಶ್ರಮ ಮತ್ತು ಬದ್ಧತೆಗಳನ್ನು ದಿನವೂ ಪ್ರದರ್ಶಿಸಬೇಕಾಗುತ್ತದೆ ಎಂದರು.ಪತ್ರಕರ್ತನಾದವನಿಗೆ ಎಲ್ಲಾ ವಿಷಯಗಳ ಬಗ್ಗೆಯೂ ಮಾಹಿತಿ ಮತ್ತು ಜ್ಞಾನವಿರಬೇಕು. ಅವನು ಆಗಾಗ್ಗೆ ತನ್ನ ಬುದ್ಧಿಗೆ ಸಾಣೆ ಹಿಡಿಯಬೇಕು ಎಂದು ಅವರು ಹೇಳಿದರು.
ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ ಈ ನಿಟ್ಟಿನಲ್ಲಿ ನಿಜ ಪತ್ರಿಕೋದ್ಯಮವನ್ನು ಓದಿದವರು ಜವಾಬ್ದಾರಿಯುತವಾಗಿ ವರ್ತಿಸುವ ಅಗತ್ಯವಿದೆ ಎಂದರು.ನಂತರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಪ್ರಾಧ್ಯಾಪಕರಾದ ಡಿ.ಎಸ್ ಗುರುರವರು ನವಮಾಧ್ಯಮಗಳು ಮತ್ತು ತಂತ್ರಜ್ಞಾನದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ . ಎಂ.ಎಸ್ ಸಪ್ನ , ಪ್ರಾಧ್ಯಾಪಕರಾದ ಸಿ.ಕೆ ಪುಟ್ಟಸ್ವಾಮಿ, ಪ್ರೊ. ಎನ್ ಮಮತ, ವಿಭಾಗದ ಅತಿಥಿ ಉಪನ್ಯಾಸಕರು, ಸಂಶೋಧಕರು ಉಪಸ್ಥಿತರಿದ್ದರು.