ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದ ಬಡವರಿಗೆ ನಿರ್ಮಿಸಿ ಕೊಡಲಾಗುತ್ತಿರುವ ವಸತಿ ಯೋಜನೆಗೆ 6170 ಕೋಟಿ ರೂ. ಸರ್ಕಾರ ವೇ ಭರಿಸಲು ತೀರ್ಮಾನ ಮಾಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ 1.80 ಲಕ್ಷ ಮನೆ ಪೂರ್ಣ ಗೊಳಿಸುವ ಕ್ರಾಂತಿಕಾರಿ ನಿರ್ಧಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಇದು ನಮ್ಮ ಸರ್ಕಾರ ದ ಆರನೇ ಗ್ಯಾರಂಟಿ ಎಂದು ಹೇಳಿದರು.
ಮೊದಲ ಹಂತದಲ್ಲಿ 48 ಸಾವಿರ ಮನೆ ಪೂರ್ಣ ಗೊಳಿಸಲು 500 ಕೋಟಿ ರೂ. ಬಿಡುಗಡೆ ಆಗಲಿದೆ ಎಂದು ತಿಳಿಸಿದರು.
ಫಲಾನುಭವಿಗಳು ತಲಾ 4.50 ಲಕ್ಷ ರೂ. ಬದಲಿಗೆ 1 ಲಕ್ಷ ರೂ. ನೀಡಿದರೆ ಉಳಿದ ಮೊತ್ತ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹಮದ್ ಅವರು ಇಲಾಖೆ ಹೊಣೆ ಗಾರಿಕೆ ವಹಿಸಿಕೊಂಡ ದಿನದಿಂದ ಬಡವರಿಗೆ ಮನೆ ಕಟ್ಟಿಕೊಡಲು 50 ಕ್ಕೂ ಹೆಚ್ಚು ಬಾರಿ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ, ರಾಜ್ಯ ಎಲ್ಲೆಡೆ ಪ್ರವಾಸ ಮಾಡಿ ವಾಸ್ತವ ಮಾಹಿತಿ ಪಡೆದು ಬಡ ಕುಟುಂಬಗಳ ಪರಿಸ್ಥಿತಿ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅವರನ್ನು ಮನವೊಲಿಸಿದ್ದರು.