ಬೆಂಗಳೂರು: ಪದ್ಮಭೂಷಣ ಪ್ರಶಸ್ತಿ ಪುರಸ್ಕöÈತರು, ಹಿರಿಯ ಸಾಹಿತಿಎಸ್.ಎಲ್ ಭೈರಪ್ಪನವರು ವಯೋಸಹಜಕಾಯಿಲೆಯಿಂದ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿನಿಂದಕನ್ನಡ ಸಾಹಿತ್ಯ ನೀರವ ಮೌನ ಆವರಿಸಿದೆ.
ಇಂದು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧ ಗಂಟೆ ವರೆಗೆರವೀಂದ್ರಕಲಾಕ್ಷೇತ್ರದಲ್ಲಿ ಭೈರಪ್ಪನವರ ಪಾರ್ಥೀವ ಶರೀರಅಂತಿಮದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ೧ ಗಂಟೆ ಬಳಿಕ ಬೆಂಗಳೂರಿನಿಂದ ಮೈಸೂರಿಗೆರವಾನೆ ಮಾಡಲಾಗುತ್ತದೆ. ಮಧ್ಯಾಹ್ನ ೩ ಗಂಟೆ ವೇಳೆಗೆ ಪಾರ್ಥೀವ ಶರೀರ ಮೈಸೂರುತಲುಪಲಿದೆ. ಬಳಿಕ ಮೈಸೂರುಕಲಾಮಂದಿರದ ಮುಂಭಾಗ ಸಾರ್ವಜನಿಕರದರ್ಶನಕ್ಕೆಇಡಲಾಗುತ್ತದೆ. ಸಂಜೆ ೬ ಗಂಟೆವರೆಗೆದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಕೋಲ್ಡ್ ಸ್ಟೋರೆಜ್ನಲ್ಲಿಇಡಲಾಗುತ್ತೆ. ಸೆ.೨೬ರಂದು ಶುಕ್ರವಾರ ಬೆಳಗ್ಗೆ ಕುವೆಂಪುನಗರದಲ್ಲಿರುವ ಭೈರಪ್ಪ ನಿವಾಸದಲ್ಲಿ ಪಾರ್ಥೀವ ಶರೀರಇಡಲಾಗುತ್ತದೆ.
ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಚಾಮುಂಡಿಬೆಟ್ಟದತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆಅಂತ್ಯಕ್ರಿಯೆ ಮಾಡಲಾಗುತ್ತದೆ. ಸದ್ಯ ಭೈರಪ್ಪಅವರ ಪುತ್ರರವಿಶಂಕರ್ ಲಂಡನ್ ನಿಂದಆಗಮಿಸುತ್ತಿದ್ದಾರೆ.