ಕೇರಳ: ರಾಜ್ಯದಾದ್ಯಂತ ಕಳೆದ ಕೆಲ ವಾರಗಳಿಂದ ಸ್ಮಗ್ಲಿAಗ್ ಪ್ರಕರಣಕ್ಕೆ ಸಂಬAಧಪಟ್ಟAತೆ ಇ.ಡಿ.(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಟ ದುಲ್ಕರ್
ಸಲ್ಮಾನ್ ಮತ್ತು ಅವರ ತಂದೆ ಮಮ್ಮುಟಿ, ಪೃಥ್ವಿರಾಜ್ ಸುಕುಮಾರ್ ಮನೆಗಳ ಮೇಲೆ ದಾಳಿ ಮಾಡಿದೆ. ಮಮ್ಮುಟಿ ಅವರಿಗೆ ಸೇರಿದ ಚೆನ್ನೆöÊನ ಕಚೇರಿ, ಮಮ್ಮುಟಿ ಅವರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದುಲ್ಕರ್ ಸಲ್ಮಾನ್ ಅವರ ಕಚೇರಿ, ನಿವಾಸ. ಪೃಥ್ವಿರಾಜ್ ಸುಕುಮಾರ್ ಅವರ ಮನೆ, ನಟ ಅಮಿತ್ ಚಕ್ಕಲಕಲ್ ಅವರ ನಿವಾಸದ ಮೇಲೆಯೂ ಸಹ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು ೧೭ ಕಡೆಗಳಲ್ಲಿ ದಾಳಿ
ನಡೆಸಲಾಗಿದೆ.
ಕೆಲ ದಿನಗಳ ಹಿಂದಷ್ಟೆ ಕಸ್ಟಮ್ಸ್ ಅಧಿಕಾರಿಗಳು `ನೂಮ್ಕೂರ್’ ಹೆಸರಿನಲ್ಲಿ ಕೇರಳ ರಾಜ್ಯದಾದ್ಯಂತ ಹಲವು ನಗರಗಳಲ್ಲಿ ಸಿನಿಮಾ ನಟರು, ಉದ್ಯಮಿಗಳ
ಮನೆಗಳ ಮೇಲೆ ದಾಳಿ ನಡೆಸಿ ಅವರು ಹೊಂದಿರುವ ವಿದೇಶಿ ಕಾರುಗಳು ಅವುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ದುಲ್ಕರ್
ಸಲ್ಮಾನ್ ಅವರಿಗೆ ಸೇರಿದ ಕಾರೊಂದನ್ನು ಜಪ್ತಿ ಮಾಡಲಾಗಿದೆ. ದುಲ್ಕರ್ ಸಲ್ಮಾನ್ ಅವರ ಬಳಿ ವಿದೇಶಿ ಬ್ರಾ÷್ಯಂಡುಗಳ ಸುಮಾರು ೪೦ಕ್ಕೂ ಹೆಚ್ಚು
ಕಾರುಗಳ ಸಂಗ್ರಹ ಇರುವುದು ಬೆಳಕಿಗೆ ಬಂದಿತ್ತು. ದುಲ್ಕರ್ ಮಾತ್ರವಲ್ಲದೆ, ಪೃಥ್ವಿರಾಜ್ ಸುಕುಮಾರ್ ಅವರ ನಿವಾಸದ ಮೇಲೂ ಕಸ್ಟಮ್ಸ್ ಅಧಿಕಾರಿಗಳು
ದಾಳಿ ನಡೆಸಿದ್ದರು.